ಬಂಟ್ವಾಳ : ವೃದ್ಧಿ ಸಿನಿ ಕ್ರಿಯೇಶನ್ಸ್ ವಗ್ಗ ಇವರಿಂದ ನ್ಯಾಯವಾದಿ ವಿನಯ ನಾಯಕ್ ಪಚ್ಚಾಜೆ ಮತ್ತು ಸುನೀತಾ ವಿನಯ ನಾಯಕ್ ಅವರ ನಿರ್ಮಾಣದಲ್ಲಿ ಮುತ್ತಪ್ಪ ರೈ ಪುತ್ತೂರು ಅವರ ಸಹಕಾರದಲ್ಲಿ ಸೆಟ್ಟೇರಲಿರುವ ಚೊಚ್ಚಲ ತುಳು ಚಲನಚಿತ್ರ ಪನೊಡಾ ಬೊಡ್ಚಾ ಇದರ ಚಿತ್ರೀಕರಣದ ಶುಭ ಮುಹೂರ್ತ ಶ್ರೀ ಕ್ಷೇತ್ರ ಕಾರಿಂಜದ ಶಿವಪಾರ್ವತಿ ಸನ್ನಿಧಿಯಲ್ಲಿ ಆ.30ರಂದು ರವಿವಾರ ಬೆಳಗ್ಗೆ 9.45ಕ್ಕೆ ಜರಗಲಿದೆ.
ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಆರಂಭ ಫಲಕ ನಡೆಸಲಿರುವರು. ಸಂಸದ ನಳಿನ್ ಕುಮಾರ್ ಕಟೀಲು ಅವರು ಉದ್ಘಾಟಿಸಲಿರುವರು. ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಅವರು ಕ್ಯಾಮರಾ ಚಾಲನೆ ನೀಡಲಿದ್ದಾರೆ. ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಸದಸ್ಯ ಪಿ.ಜಿನರಾಜ ಆರಿಗ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ತಾ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್, ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಜಿ.ಪಂ.ಸದಸ್ಯೆ ಗಿರಿಜಾ, ಚಾಲಿಪೋಲಿಲು ತುಳು ಚಲನಚಿತ್ರದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಎಕ್ಕ-ಸಕ್ಕ ತುಳು ಚಲನಚಿತ್ರದ ನಿರ್ಮಾಪಕ ಲಯನ್ ಕಿಶೋರ್ ಡಿ. ಶೆಟ್ಟಿ , ಸೂಪರ್ ಮರ್ಮಯೆ ತುಳು ಚಲನಚಿತ್ರ ನಿರ್ಮಾಪಕ ಮಾಧವ ನಾೈಕ್ ಅಡ್ಯಾರ್, ಪುತ್ತೂರು ಉದ್ಯಮಿ ಕರುಣಾಕರ ರೈ ದೇರ್ಲ, ಮಂಗಳೂರು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಚಿತ್ರದಲ್ಲಿ ಜಿಲ್ಲೆಯ ಖ್ಯಾತ ಕಲಾವಿದರ ಜೊತೆ ಹೊಸಬರಿಗೆ ಅವಕಾಶ ನೀಡಲಾಗಿದೆ. ಶಿವಧ್ವಜ್, ವಿನಯ ಪ್ರಸಾದ್, ಸೀತಾ ಕೋಟೆ, ಇಳಾ ವಿಟ್ಲ , ಶಕುಂತಳಾ, ನವೀನ್ ಡಿ. ಪಡೀಲ್, ಕಿಶೋರ್ ಡಿ. ಶೆಟ್ಟಿ , ಸುಂದರ ರೈ ಮಂದಾರ, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ರಾಘವೇಂದ್ರ ರೈ , ಚೇತನ್ ರೈ ಮಾಣಿ, ಯೋಗೀಶ್ ಆಚಾರ್, ಉಮೇಶ್ ಮಿಜಾರ್, ಹರೀಶ್ ರಾಯ್, ಗಿರೀಶ್ ಶೆಟ್ಟಿ , ಎಚ್ಕೆ ನಯನಾಡು, ಚಂದ್ರಹಾಸ ಶೆಟ್ಟಿ , ಶೋಭಾ ಶೆಟ್ಟಿ ಮತ್ತಿತರರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಮಧು ಸುರತ್ಕಲ್ ಆ್ಯಕ್ಷನ್ – ಕಟ್ ಹೇಳಲಿದ್ದಾರೆ. ಸುಂದರ ರೈ ಮಂದಾರ ಅವರ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ಮಾಣ, ಎಚ್ಕೆ ನಯನಾಡು, ವಸಂತ ಅಮೀನ್ ಅವರ ಸಾಹಿತ್ಯವಿದೆ. ಚಂದ್ರಕಾಂತ್ ಶೆಟ್ಟಿ ಸಂಗೀತ ನೀಡಲಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದ್ದು ಕೇಶವ ಸುವರ್ಣ ಅವರ ಕಲಾ ನಿರ್ದೇಶನವಿದೆ. ಗಣೇಶ್ ಶೆಟ್ಟಿ ಸುಧೆಕಾರ್, ಚಂದ್ರಹಾಸ ಶೆಟ್ಟಿ , ಎಚ್ಕೆ ನಯನಾಡು ಕಾರ್ಯಕಾರಿ ನಿರ್ಮಾಪಕರು. ಸಚಿನ್ ಶೆಟ್ಟಿ ಕುಂಬ್ಳೆ ಸಹನಿರ್ದೇಶನ, ಶ್ರೀನಿವಾಸ ಪಿ.ಬಾಬು ಅವರ ಸಂಕಲನವಿದೆ.

By suddi9

Leave a Reply

Your email address will not be published. Required fields are marked *