ಸುದ್ಬಂದಿ9 ಬಂಟ್ವಾಳ:
ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬಿ.ಜನಾರ್ದನ ಪೂಜಾರಿ ಗೆಲುವು ಖಚಿತವಾಗಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ನಡೆಸಿದ ಪ್ರಚಾರ ಸಂದರ್ಭದಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ಮತ್ತು ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ವಕೀಲ ಅಶ್ವನಿ ಕುಮಾರ್ ರೈ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಭಾನುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಬಾರಿ ಜನತೆ ಬದಲಾವಣೆ ಬಯಸಿದ್ದು, ಇದರಿಂದಾಗಿ ಜನಾರ್ದನ ಪೂಜಾರಿ ಅವರು ಸಂಸದರಾಗಿ ಬಹುಮತದಿಂದ ಗೆಲುವು ಸಾಧಿಸುವ ವಿಶ್ವಾಸ ಪಕ್ಷದ ಕಾರ್ಯಕರ್ತರಿಗೆ ಬಂದಿದೆ ಎಂದರು.
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಪುರಸಭಾ ಉಪಾಧ್ಯಕ್ಷೆ ಯಾಸ್ಮಿನ್, ಸದಸ್ಯರಾದ ಸದಾಶಿವ ಬಂಗೇರ, ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ಜೆಸಿಂತ, ಪ್ರಭಾ ಆರ್.ಸಾಲ್ಯಾನ್, ಸಂಜೀವಿ, ವಾಸು ಪೂಜಾರಿ ಲೊರೆಟ್ಟೊ, ಪ್ರವೀಣ್ ಜಕ್ರಿಬೆಟ್ಟು, ಚಂಚಲಾಕ್ಷಿ ಸಹಿತ ಪಕ್ಷದ ಪ್ರಮುಖರಾದ ಜಯರಾಮ ಸಾಮಾನಿ ತುಂಬೆ, ಗೋಪಾಲಕೃಷ್ಣ ಸುವರ್ಣ ತುಂಬೆ, ಶಮೀರ್ ಶಾಂತಿಅಂಗಡಿ, ಇಕ್ಬಾಲ್ ಅಕ್ಕರಂಗಡಿ, ಗುಲಾಬಿ, ಎನ್.ಪ್ರಶಾಂತ ಕಾರಂತ, ಎ.ನೋಣಯ ಪೂಜಾರಿ ಮಾಜಿ ಪುರಸಭಾ ಸದಸ್ಯರಾದ ಮಹಮ್ಮದ್ ರಫೀಕ್, ದಾಮೋದರ ಸಪಲ್ಯ ಮೆಲ್ಕಾರ್, ಎಸ್.ಅಬೂಬಕ್ಕರ್ ಮತ್ತಿತರ ತಂಡವೇ ಮತಯಾಚನೆಯಲ್ಲಿ ಪಾಲ್ಗೊಂಡಿತ್ತು.
ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶದಲ್ಲಿಯೂ ಜನಾಭಿಪ್ರಾಯ ಪಕ್ಷದ ಅಭ್ಯಥರ್ಿ ಪರವಾಗಿದೆ ಎಂದು ಅವರು ವಿವರಿಸಿದರು.
ಹಾಸನ ಕ್ಷೇತ್ರದಲ್ಲಿ ಕೂಡಾ ನನಗೆ ಉಸ್ತುವಾರಿಯಾಗಿ ಪಕ್ಷವು ಮಹತ್ತರ ಜವಾಬ್ದಾರಿ ನೀಡಿದ್ದು, ಅಲ್ಲ್ಲಿಯೂ ಕಾಂಗ್ರೆಸ್ ಅಲೆ ಎದ್ದು ಕಾಣುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ಟೀವನ್ ಡಿ’ಸೋಜ, ಮಹಮ್ಮದ್ ವಳವೂರು, ಅರುಣ್ ರೋಶನ್ ಡಿ’ಸೋಜ, ಶೋಬಿತ್ ಪೂಂಜ, ಜೀವನ್ ಲಾಯ್ಡ್ ಪಿಂಟೊ, ಕರೀಂ ಬೊಳ್ಳಾಯಿ, ಅಶ್ರಫ್ ಕೈಕಂಬ, ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *