rajesh nayk matha yachanerajesh nayk matha yachane

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು -ಜಾರಂದಗುಡ್ಡೆ ರಸ್ತೆಯಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ನೇತೃತ್ವದಲ್ಲಿ ಭಾನುವಾರ ಸಂಜೆ ಬಿಜೆಪಿ ಕಾರ್ಯಕರ್ತರು ಪಾದಯಾತ್ರೆ ಮೂಲಕ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಪರ ಮತಯಾಚನೆ ನಡೆಸಿದರು. ಪುರುಷ ಎನ್.ಸಾಲ್ಯಾನ್, ಚರಣ್ ಜುಮಾದಿಗುಡ್ಡೆ, ಮಹೇಶ ಶೆಟ್ಟಿ, ಮನೋಜ್, ರೂಪೇಶ್ ದರಿಬಾಗಿಲು, ರಮಾನಾಥ ಭಂಡಾರಿ ಮತ್ತಿತರರು ಇದ್ದರು.
ನಳಿನ್ಗೆ ಯುವಜನತೆ ಬೆಂಬಲ: ಉಳಿಪಾಡಿ

ulipady mathayachane
ulipady mathayachane

 

 

rajesh nayk matha yachane
rajesh nayk matha yachane

ಕಳೆದ ಪ್ರಥಮ ಅವಧಿಯಲ್ಲಿ ಸಮರ್ಥವಾಗಿ ಸಂಸದರ ನಿಧಿ ಬಳಕೆ ಮತ್ತು ಕೇಂದ್ರ ಸಕರ್ಾರದ ಅಸಹಕಾರದ ನಡುವೆಯೂ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಭ್ರಷ್ಟಾಚಾರರಹಿತ ಮತ್ತು ಪಾರದರ್ಶಕವಾಗಿ ನಳಿನ್ ಕುಮಾರ್ ಕಟೀಲು ಇವರು ಶ್ರಮವಹಿಸಿದ್ದಾರೆ.
ಈ ಬಾರಿ ರಾಷ್ಟ್ರರಕ್ಷಣೆಗಾಗಿ ‘ಮೋದಿ ಅಲೆ’ಯ ಜೊತೆಗೆ ನಳಿನ್ಗೆ ಯುವಜನತೆಯಿಂದ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಹೇಳಿದ್ದಾರೆ.
ತಾಲ್ಲೂಕಿನ ಬ್ರಹ್ಮರಕೂಟ್ಲು -ಜಾರಂದಗುಡ್ಡೆ ರಸ್ತೆಯಲ್ಲಿ ಬಿಜೆಪಿ ಭಾನುವಾರ ಸಂಜೆ ಪಾದಯಾತ್ರೆ ಮೂಲಕ ಮತಯಾಚನೆ ನಡೆಸಿದ ಬಳಿಕ ಮಾತನಾಡಿದರು.

ಜಿಲ್ಲಾ ಬಿಜೆಪಿ ಪ್ರಚಾರ ಸಮಿತಿ ಪ್ರಮುಖ್ ಎ. ರುಕ್ಮಯ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಕೂಡಲೇ ಜಿಲ್ಲೆಯ ವಿವಿಧೆಡೆ ವಿದ್ಯಾರ್ಥಿ ನಿಯರ ಮೇಲೆ ಅತ್ಯಾಚಾರ, ಹಿಂದು ಯುವಕರ ಕೊಲೆ ನಡೆದಿದ್ದರೂ ಆರೋಪಿಗಳನ್ನು ಪೊಲೀಸರ ಮೂಲಕ ಕಾಂಗ್ರೆಸ್ಸಿಗರು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಲ್ಲಡ್ಕದಲ್ಲಿ ಕಾಂಗ್ರೆಸ್ ಸಾಮರಸ್ಯ ಸಮಾವೇಶ ನೆಪದಲ್ಲಿ ಆರಂಭಗೊಂಡ ಗುಂಪು ಘರ್ಷಣೆಗೆ ಕೋಮು ಬಣ್ಣ ನೀಡಿ, ಬಿಜೆಪಿ ಮತ್ತು ಹಿಮದೂ ಸಂಘಟನೆ ಕಾರ್ಯಕರ್ತರನ್ನು ಮಾತ್ರ ಬಂಧಿಸುವ ಮೂಲಕ ಜಾತಿ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಇದಕ್ಕಾಗಿ ಎಲ್ಲಾ ಸಮುದಾಯದ ಮತದಾರರು ಒಟ್ಟಾಗಿ ಬಿಜೆಪಿ ಗೆಲ್ಲಿಸುವ ಮೂಲಕ ದೇಶದಲ್ಲಿ ಸಮಾನತೆಗೆ ಪ್ರಾಮುಖ್ಯತೆ ನೀಡಬೇಕು ಎಂದರು.
ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಕ್ಷೇತ್ರಾಧ್ಯಕ್ಷ ಜಿ.ಆನಂದ, ಪ್ರಮುಖರಾದ ಪುರುಷ ಎನ್.ಸಾಲ್ಯಾನ್, ಎಂ.ತುಂಗಪ್ಪ ಬಂಗೇರ, ಸುಲೋಚನಾ ಜಿ. ಕೆ. ಭಟ್, ವಸಂತ ಕುಮಾರ್ ಅಣ್ಣಳಿಕೆ, ದೇವಪ್ಪ ಪೂಜಾರಿ, ಪುಷ್ಪರಾಜ ಶೆಟ್ಟಿ, ಆನಂದ ಕುಲಾಲ್, ಸೀತಾರಾಮ ಶೆಟ್ಟಿ, ರಮೇಶ್ ಕುಡ್ಮೇರ್,ಚರಣ್ ಜುಮಾದಿಗುಡ್ಡೆ, ಮಹೇಶ ಶೆಟ್ಟಿ, ಮನೋಜ್, ರೂಪೇಶ್ ದರಿಬಾಗಿಲು, ರಮಾನಾಥ ಭಂಡಾರಿ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *