ಮೂಡುಬಿದಿರೆ : ಇಲ್ಲಿನ ಜಮೀಯ್ಯತ್ತುಲ್ ಫಲಾಹ್ ವತಿಯಿಂದ ಬಡ ವಿದ್ಯಾಥರ್ಿಗಳಿಗೆ ಕೊಡ ಮಾಡುವ ವಿದ್ಯಾರ್ಥಿ  ವೇತನವನ್ನು ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್ ಶನಿವಾರ ಸಮಾಜ ಮಂದಿರದಲ್ಲಿ ವಿತರಿಸಿದರು.

23 mood jamiyathul phalah (1)

23 mood jamiyathul phalah (2)

ನಂತರ ಮಾತನಾಡಿದ ಅವರು ಹಿಂದೆ ಮುಸ್ಲಿಂ ಧರ್ಮಕ್ಕೆ ಸೇರಿರುವ ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಿಕ್ಷಣವನ್ನು ನೀಡದೆ ಮನೆಯಲ್ಲಿಯೇ ಕೂರಿಸಿ ಮದುವೆ ಮಾಡಿಬಿಡುವಂತಹ ವ್ಯವಸ್ಥೆ ಇತ್ತು. ಆದರೆ ಇಂದು ಆ ಸ್ಥಿತಿ ಸ್ವಲ್ಪ ಮಟ್ಟಿಗೆ ಬದಲಾವಣೆಯಾಗುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಸಾಧನೆಯನ್ನು ಮಾಡುತ್ತಿದ್ದಾರೆ. ಹೆತ್ತವರು ಮಕ್ಕಳಲ್ಲಿ ಹೆಣ್ಣು-ಗಂಡೆಂಬ ಬೇಧವನ್ನು ಮಾಡದೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳುವಂತೆ ಮಾಡಬೇಕಾಗಿದೆ ಎಂದು ಹೇಳಿದ ಅವರು ಸಂಘ ಸಂಸ್ಥೆಗಳು ತಮ್ಮ ಶಿಕ್ಷಣಕ್ಕೆ ಸಹಕರಿಸಿದಂತೆ ತಾನು ಕೂಡಾ ಮುಂದೆ ಇತರ ಸಂಸ್ಥೆಗಳಿಗೆ ಸಹಾಯವನ್ನು ಮಾಡುವ ಮೂಲಕ ಇತರ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕೆಂದು ಸಲಹೆ ನೀಡಿದರು.

ತೋಡಾರು ಶಂಸುಲ್ ಉಲಾಮಾ ಅರೇಬಿಕ್ ಕಾಲೇಜಿನ ಅಹಮ್ಮದ್ ನಯೀಮ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ಗಳು ಶಿಕ್ಷಣದ ಮಹತ್ವವನ್ನು ಅರಿಯಿರಿ. ರಾಷ್ಟ್ರದ ಉನ್ನತ ಹುದ್ದೆಗಳನ್ನು ಅಲಂಕರಿಸಲು ಶಿಕ್ಷಣವೇ ಮುಖ್ಯವಾಗಿದೆ. ಸಮುದಾಯ ಹಲವು ಜನ ಈಗಾಗಲೇ ಶಿಕ್ಷಣದ ಮೂಲಕ ಸಾಧನೆಗಳನ್ನು ಮಾಡಿದವರಿದ್ದಾರೆ ಎಂದ ಅವರು ಸಾಧಕ ಮಾಜಿ ರಾಷ್ಟ್ರಪತಿ ಡಾ.ಎ.ಜೆ.ಅಬ್ದುಲ್ ಕಲಾಂ ಅವರ ಹೆಸರನ್ನು ಉಲ್ಲೇಖಿಸಿದ ಅವರು ಶಿಕ್ಷಣವೇ ಸಮುದಾಯದ ಅಭಿವೃದ್ಧಿಗೆ ಸಹಕಾರಿ ಎಂದು ಹೇಳಿದರು.

ಮೂಡುಬಿದಿರೆ ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಕಾಮತ್, ಹಸ್ದುಲ್ಲಾ ಇಸ್ಮಾಯಿಲ್, ಮತ್ತು ಜೈನ್ ಹೈಸ್ಕೂಲ್ನ ಪ್ರಾಧ್ಯಾಪಕ ವಿನಯಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮೂಡುಬಿದಿರೆ ಜಮೀಯ್ಯತ್ತುಲ್ ಫಲಾಹ್ನ ಅಧ್ಯಕ್ಷ ಶೇಖ್ ಅಬ್ದುಲ್ ಗಫೂರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಜಮೀಯ್ಯತ್ತುಲ್ ಫಲಾಹ್ ಕಳೆದ 25 ವರ್ಷಗಳಿಂದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರವನ್ನು ನೀಡುತ್ತಾ ಬರುತ್ತಿದೆ ಎಂದು ಹೇಳಿದರು.

ತೋಡಾರು ಶಂಸುಲ್ ಉಲಾಮಾ ಅರೇಬಿಕ್ ಕಾಲೇಜಿನ ವಿದ್ಯಾಥರ್ಿ ರಿಯಾಝ್ ಕಾರ್ಯಕ್ರಮ ನಿರೂಪಿಸಿದರು.ಪ್ರಧಾನ ಕಾರ್ಯದರ್ಶಿ ಸಲೀಂ ಹಂಡೇಲು ವಂದಿಸಿದರು.

 

By suddi9

Leave a Reply

Your email address will not be published. Required fields are marked *