ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅಮ್ಮುಂಜೆ ಗ್ರಾಮ ಪಂಚಾಯಿತಿನಲ್ಲಿ ಗುರುವಾರ ನಡೆದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಒಟ್ಟು 49 ಮಂದಿ ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಯಡಿ ಸಾಮಾಜಿಕ ಭದ್ರತೆ ಯೋಜನೆಯಡಿ ಮಂಜೂರಾದ ಪಿಂಚಣಿ ಮತ್ತಿತರ ಆದೇಶಪತ್ರ ವಿತರಿಸಲಾಯಿತು.
ಅಮ್ಮುಂಜೆ ಗ್ರಾ.ಪಂ.ಅಧ್ಯಕ್ಷೆ ಪ್ರೇಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಮ್ಮುಂಜೆ ಮಾತ್ರವಲ್ಲದೆ ಸ್ಥಳೀಯ ಬಡಗಬೆಳ್ಳೂರು, ಕರಿಯಂಗಳ, ತೆಂಕಬೆಳ್ಳೂರು, ಬಿ.ಮೂಡ ಗ್ರಾಮಗಳಿಗೆ ಸಂಬಂಧಿಸಿದಂತೆ ನೂರಾರು ಮಂದಿಗೆ ಕಂದಾಯ ಅದಾಲತ್ ಮೂಲಕ ಪಹಣಿ ತಿದ್ದುಪಡಿ ಸಾಧ್ಯವಾಗಿದೆ ಎಂದರು. ಗ್ರಾ.ಪಂ.ಉಪಾಧ್ಯಕ್ಷ ವಾಮನ ಆಚಾರ್ಯ ಶುಭ ಹಾರೈಸಿದರು.
5
ಉಪ ತಹಶೀಲ್ದಾರ್ ಜೆ.ಪಿ.ರಾಡ್ರಿಗಸ್ ಕಂದಾಯ ಇಲಾಖೆ ವತಿಯಿಂದ ನಡೆಯುವ ಕಂದಾಯ ಅದಾಲತ್ ಕಾರ್ಯವೈಖರಿ ಮತ್ತು ಸಾಮಾಜಿಕ ಭದ್ರತಾ ಯೋಜನೆಯಡಿ ಸಿಗುವ ಪಿಂಚಣಿ ವಿವಿಧ ಬಗ್ಗೆ ಮಾಹಿತಿ ನೀಡಿದರು.
ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ, ಮಾಜಿ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಉಪಾಧ್ಯಕ್ಷ ಚಂದ್ರಶೇಖರ ರಾವ್, ಉಪ ತಹಶೀಲ್ದಾರ್ ವಾಮನ, ಗ್ರಾಮಕರಣಿಕರಾದ ಬಸಪ್ಪ, ನವೀನ್, ರಾಜ್ ಕುಮಾರ್ , ಪಿಡಿ ಓ ನವೀನ್ ಭಂಡಾರಿ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *