ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಗಂಟಾಲ್ಕಟ್ಟೆ ಗಂಟಾಲ್ಕಟ್ಟೆಯಲ್ಲಿ ನಡೆಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಗುರುವಾರ ಸಂಜೆ ದಾಳಿ ನಡೆಸಿದ್ದು, ಈ ಸಂದರ್ಭ ಇತ್ತಂಡಗಳ ಘರ್ಷನೆ ಉಂಟಾಗಿದ್ದು, ಪರಿಸರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.

IMG-20150820-WA0039

IMG-20150820-WA0040

IMG-20150820-WA0041

IMG-20150820-WA0044

ಖಚಿತ ಮಾಹಿತಿಯನ್ನು ಪಡೆದ ಮೂಡುಬಿದಿರೆಯ ಹಿಂದೂ ಸಂಘಟನೆ ಕಾರ್ಯಕರ್ತರರು ಗಂಟಾಲ್ಕಟ್ಟೆ ಜಂಕ್ಷನ್ನಲ್ಲಿ ಹಾಡಿಯೊಂದರಲಿ ಕಟ್ಟಿ ಹಾಕಲಾದ ಜಾನುವಾರುಗಳಿರುವ ಸ್ಥಳಕ್ಕೆ ದಾಳಿ ನಡೆಸಿದರು. ಇನ್ನೊಂದು ಕೋಮಿನ ಯುವಕರ ತಂಡವೊಂದು ಇದನ್ನು ಪ್ರತಿಭಟಿಸಿದ್ದು, ಇತ್ತಂಡಗಳ ನಡುವೆ ಮಾತಿನ ಚಕಾಮಕಿ ನಡೆಯಿತು. ಕೈ-ಕೈ ಮಿಲಾಯಿಸಿದರು. ಸ್ಥಳಕ್ಕೆ ಬಂದ 4 ಜನ ಪೊಲೀಸರು ತಂಡಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಕೆಲ ಹೊತ್ತು ಉಧ್ವಿಗ್ನ ವಾತಾವರಣವೇ ಮುಂದುವರೆಯಿತು. ಆ ಬಳಿಕ ತಂಡಗಳನ್ನು ನಿಯಂತ್ರಿಸಲು ಪೊಲೀಸರು ಸಫಲರಾದರು.
..
ಜಿಪ್ ಬಿಚ್ಚಿ ಅನುಚಿತ ವರ್ತನೆ:
ಗಲಾಟೆಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಟಿ.ವಿ ವರದಿಗಾರರನ್ನು ನೋಡಿದ ವ್ಯಕ್ತಿಯೊಬ್ಬ, ಅದನ್ನು ಏನು ತೆಗೆತ್ತಿದ್ದೀರಿ, ಇದನ್ನು ತೆಗೆಯಿರಿ ಎಂದು ಪ್ಯಾಂಟ್ ಜಿಪ್ ತೆಗೆದಿದ್ದಾನೆ. ಮಾಧ್ಯಮದವರೆಂದು ಗಮನಿಸಿದ ಮತ್ತೊಬ್ಬ ಅವನನ್ನು ಅಲ್ಲಿಂದ ಕಳುಹಿಸಿದ್ದಾನೆ.

By suddi9

Leave a Reply

Your email address will not be published. Required fields are marked *