ಬಂಟ್ವಾಳ : ಸಜಿಪ ಮೂಡ ಗ್ರಾಮದ ಕೊಳಕೆ ಹಿದಾಯತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ಸಂಘಟನೆಯಾದ ಸುನ್ನೀ ಬಾಲ ಸಂಘ (ಎಸ್ಬಿಎಸ್) ಇದರ ನೂತನ ಸಾಲಿನ ಅಧ್ಯಕ್ಷರಾಗಿ ಉಸ್ಮಾನ್ ಆಯ್ಕೆಯಾಗಿದ್ದಾರೆ.

ಸ್ಥಳೀಯ ಖತೀಬ್ ಅಬ್ದುಲ್ ಬಶೀರ್ ಮದನಿ ಅಧ್ಯಕ್ಷತೆಯಲ್ಲಿ ಕೊಳಕೆ ಮದ್ರಸದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಮದ್ರಸ ಮುಖ್ಯ ಶಿಕ್ಷಕ ಟಿ.ಕೆ. ಅಬ್ದುಲ್ ರಝಾಕ್ ಸಖಾಫಿ, ಹೈದರ್ ಮದನಿ ಕೆಮ್ಮಾರ ಈ ಸಂದರ್ಭ ಉಪಸ್ಥಿತರಿದ್ದರು.
ಉಪಾಧ್ಯಕ್ಷರಾಗಿ ಮುಸ್ತಫಾ, ಕಾರ್ಯದರ್ಶಿಯಾಗಿ ಸಂಶುದ್ದೀನ್, ಜೊತೆ ಕಾರ್ಯದರ್ಶಿಯಾಗಿ ತೌಸೀಫ್, ಕೋಶಾಧಿಕಾರಿಯಾಗಿ ಹೈದರ್ ಮದನಿ ಅವರನ್ನು ಆರಿಸಲಾಯಿತು. ಗೌರವಾಧ್ಯಕ್ಷರಾಗಿ ಟಿ.ಕೆ. ಅಬ್ದುಲ್ ರಝಾಕ್ ಸಖಾಫಿ ತೆಕ್ಕಾರು, ನಿರ್ದೇಶಕರುಗಳಾಗಿ ಅಬ್ದುಲ್ ಬಶೀರ್ ಮದನಿ ಕಬಕ, ರಫೀಕ್ ಮದನಿ ಬಾಳೆಪುಣಿ ಇವರನ್ನು ನೇಮಿಸಲಾಯಿತು.
