ಬಂಟ್ವಾಳ: ಸಿದ್ದಕಟ್ಟೆ ಕರ್ಪೆ ಗ್ರಾಮದ ನಡಿಬೈಲು ನಿವಾಸಿ ಕೃಷಿಕ ಸದಾಶಿವ ಪ್ರಭು (74) ಅವರು ಅಲ್ಪ ಕಾಲದ ಅಸೌಖ್ಯದಿಂದ ಅ.18ರಂದು ರಾತ್ರಿ ಸ್ವ ಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಮತ್ತು ಸಂಗಬೆಟ್ಟು ಮಾಜಿ ಗ್ರಾ.ಪಂ.ಅಧ್ಯಕ್ಷ ಪ್ರಭಾಕರ ಪಭು ಸಹಿತ ಇಬ್ಬರು ಗಂಡು ಮತ್ತು ಒರ್ವಳು ಪುತ್ರಿಯನ್ನು ಅಗಲಿದ್ದಾರೆ.
ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಂತಾಪ ಸೂಚಿಸಿದ್ದಾರೆ. ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ತಾ.ಪಂ.ಸದಸ್ಯ ಪದ್ಮಶೇಖರ್ ಜೈನ್, ರಾಷ್ಟ್ರ ಪ್ರಶಸ್ತಿ ಶಿಕ್ಷಕ ರಮೇಶ್ ನಾಯಕ್ ರಾಯಿ, ಗ್ರಾ.ಪಂ.ಸದಸ್ಯ ದೇವಪ್ಪ ಕರ್ಕೇರ ಶೇಖರ ನಾಯ್ಕ ಮತ್ತು ಊರಿನ ಗಣ್ಯರು ಅಂತಿಮ ದರ್ಶನ ಪಡೆದರು.

