ಕಲಡ್ಕ: ಜಗತ್ತಿನ ಮೊಟ್ಟ ಮೊದಲ ನಾಗರೀಕತೆ ಭಾರತದ್ದು. ಅನೇಕ ಆಕ್ರಮಣಗಳನ್ನು ಎದುರಿಸಿ ಜಗತ್ತಿನ ಶ್ರೇಷ್ಠ ರಾಷ್ಟ್ರಗಳ ಸಾಲಿನಲ್ಲಿ ಭಾರತ ಇಂದು ಕಂಗೊಳಿಸುತ್ತಿದೆ. ಈ ರಿತಿ ಆಕ್ರಮಣಗಳನ್ನು ಎದುರಿಸಿ ಭಾರತವನ್ನು ಉಳಿಸಲು ಅನೇಕ ರಾಷ್ಟ್ರಭಕ್ತರ ಕೊಡುಗೆ ಅನನ್ಯವಾಗಿದೆ. ಇಂತಹ ರಾಷ್ಟ್ರಭಕ್ತರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಪ್ರಸಾದ್ ಕುಮಾರ್ ನ್ಯಾಯವಾದಿ, ಬಿಸಿರೋಡ್ ತಿಳಿಸಿದರು.
independence 2015ಅವರು ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಶ್ವನಾಥ ಪ್ರಭು ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ವಹಿಸಿದ್ದರು. ಸಂಸ್ಥೆಯ ಸಂಚಾಲಕರಾದ ಡಾ|ಪ್ರಭಾಕರ ಭಟ್ ಕಲ್ಲಡ್ಕ, ಮುಖ್ಯ ಶಿಕ್ಷಕರಾದ ಶ್ರೀ ರಮೇಶ್ ಶ್ರೀಮಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ನೆರವೇರಿತು. ಪ್ರತಿಭಾಕಾರಂಜಿ, ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು.
ದೀಕ್ಷಾ 10 ವಿಶ್ವೇಶ್ವರಯ್ಯ ಸ್ವಾಗತಿಸಿ, ಗೌತಮ್ 8 ಕಣ್ಣಗಿ ವಂದಿಸಿ, ಹರ್ಷಿತಾ 8 ಏಕಲವ್ಯ, ಅರುಣ್ 8 ಕಣ್ಣಗಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *