ಬಂಟ್ವಾಳ : ಶ್ರೀ ಗೋಪಾಲ್ ಕೃಷ್ಣ ಸೇವಾ ವಿಶ್ವಸ್ಥ ಮಂಡಳಿ ರಿ. ಕನಕಗಿರಿ ಮಂಚಿಯಲ್ಲಿ ಆ.17-08-2015ರ ಸೋಮವಾರದಿಂದ 23-08-2015ರ ವರೆಗೆ ಪ್ರತಿದಿನ ಸಾಯಂಕಾಲ 6.30ರಿಂದ 8.30ರವರೆಗೆ ವಿದ್ವಾನ್ ಬೆ.ನಾ.ವಿಜಯೇಂದ್ರ ಆಚಾರ್ ಮೈಸೂರು ಇವರ ನೇತೃತ್ವದಲ್ಲಿ ನಡೆಯುವ ‘ಶ್ರೀ ಮದ್ಭಾಗವತ ಸಪ್ತಾಹ’ ಕಾರ್ಯಕ್ರಮವನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ರವರು ಉದ್ಘಾಟಿಸಲಿರುವರು ಹಾಗೂ ಮುಖ್ಯ ಅತಿಥಿಯಾಗಿ ಲಯನ್ ಪ್ರಾಂತೀಯ ಅಧ್ಯಕ್ಷ /ದಾಮೋದರ್ ಬಿ.ಎಂ. ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
