ಮೂಡುಬಿದರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಮೂಡುಬಿದರೆ ತಹಸೀಲ್ದಾರರ ಕಚೇರಿ ಎದುರು ಸಿಪಿಐಎಂ ವತಿಯಿಂದ ಜನಾಂದೋಲನ ಕಾರ್ಯಕ್ರಮ ಸೋಮವಾರ ನಡೆಯಿತು.


ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಯಾದವ ಶೆಟ್ಟಿ ಯಾದವ ಶೆಟ್ಟಿ ಮಾತನಾಡಿ, ಮೂಡುಬಿದರೆ ಪುರಸಭಾ ಮಾರುಕಟ್ಟೆ ಸಂಕೀರ್ಣ ನಿರ್ಮಾಣ, ನಿರ್ವಹಣೆಯ ನ್ನು ಖಾಸಗಿಗೆ ಒಪ್ಪಿಸುವುದನ್ನು ಸಿಪಿಐಎಂ ವಿರೋಧಿಸುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ನಿವೇಶನ ರಹಿತರಿಗೆ ತೊಂದರೆಯಾಗಿರುವ 94 ಸಿ ಸಮಸ್ಯೆಯನ್ನು ಬಗೆಹರಿಸಬೇಕು. ಅವರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಸಮಾರೋಪ ಭಾಷಣ ಮಾಡಿದರು ಮಾತನಾಡಿ, ಭೂ ಸ್ವಾಧೀನ ಸುಗ್ರೀವಾಜ್ಞೆ ಯಿಂದಾಗಿ ಉಷ್ಣ ವಿದ್ಯುತ್ ಸ್ಥಾವರ ಸೇರಿದಂತೆ ಜಲ,ನೆಲ, ಜನ ಜೀವನ ನಾಶಗೊಳಿಸುವ ಕೈಗಾರಿಕೆಗಳು ನಮ್ಮ ಮೇಲೆರಗುವ ಅಪಾಯ ಕಾದಿದೆ. ಜನರ ಸಂಕಷ್ಟಗಳನ್ನು ಕೇಂದ್ರದ ಮೋದಿ ಸರ್ಕಾರ ತೀವ್ರಗೊಳಿಸಿದೆ, ರಾಜ್ಯ ಸರ್ಕಾರ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ.
ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಅಗಲಗೊಳಿಸಲಾಗುವ ಯೋಜನೆ ಸಿದ್ಧವಾಗಿದೆ ಎಂದು ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸೇರಿದ ಸಂಸದರು, ಶಾಸಕರು, ಮಂತ್ರಿಗಳು ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದ್ದಾರೆ.
ಮೂಡುಬಿದರೆ ತಹಸೀಲ್ದಾರ್ ಮಹಮ್ಮದ್ ಇಸಾಕ್ ಅವರಿಗೆ ಮನವಿ ಸಲ್ಲಿಸಲಾಯಿತು.
ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದಾಗಿ 2331 ಅರ್ಜಿಗಳಿದ್ದರೂ ಕೇವಲ 20ನ್ನು ಪರಿಗಣಿಸುವ ಸ್ಥಿತಿ ಇದೆ. ಉಳಿದಂತೆ, ಪುನರ್ ಅವಲೋಕನಕ್ಕಾಗಿ ಈಗಾಗಲೇ ಕಂದಾಯ ಮತ್ತು ಅರಣ್ಯ ಅಕಾರಿಗಳ ಸಭೆ ನಡೆಸಿ ವರದಿಯನ್ನು ಜಿಲ್ಲಾ ಸಮಿತಿಗೆ ಸಲ್ಲಿಸಲಾಗಿದ್ದು ರಾಜ್ಯ ಸಮಿತಿಯ ತೀಮರ್ಾನ ಬಂದಬಳಿಕ ಮಂದಿನ ಕ್ರಮ ಜರಗಿಸಲಾಗುವುದು. ಎಲ್ಲೇ ಆಗಲಿ, ಈ ಹಿಂದೆ ಫಲಾನುಭವಿಗಳಾಗಿದ್ದವರು ಯಾರಿಗೋ ಒಪ್ಪಿಸಿರುವುದು, ಮಾರಾಟ ಮಾಡಿರುವುದೇ ಮೊದಲಾದ ಪ್ರಕರಣಗಳನ್ನು ತನಿಖೆ ಮಾಡಿ ವಾಪಾಸ್ ತೆಗೆದುಕೊಂಡು ನಿಜವಾದ ಫಲಾನುಭವಿಗಳಿಗೆ ನೀಡುವ ಕ್ರಮ ಜರಗಿಸಲಾಗುವುದು ಎಂದರು.
ಜಿಲ್ಲಾ ಸಮಿತಿ ಸದಸ್ಯೆ ರಮಣಿ, ಸದಾಶಿವ ದಾಸ್, ವಲಯ ಸಮಿತಿ ಪ್ರಮುಖರಾದ ರಾಧಾ, ಶಂಕರ, ಸುಂದರ ಶೆಟ್ಟಿ ಮೊದಲಾದವರಿದ್ದರು.
