ಬಂಟ್ವಾಳ: ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳ ನೌಕರರು ಬಹಳಷ್ಟು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಎಷ್ಟೋ ಸಂಸ್ಥೆಗಳಲ್ಲಿ ದುಡಿದ ಬೋಧಕ-ಬೋಧಕೇತರ ವರ್ಗದವರಿಗೆ ಅನುದಾನ ದೊರಕಿದ್ದೇ ತಮ್ಮ 15-18 ವರ್ಷಗಳ ವೇತನ ರಹಿತ ಸೇವೆಯ ನಂತರವಾಗಿದೆ. ಇದೀಗ ಅನುದಾನ ದೊರಕಿದರೂ ಕಾಲ್ಪನಿಕ ವೇತನ ಮತ್ತು ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.  ಆದುದರಿಂದ ಸರಕಾರವು ಖಾಸಗಿ ಶಾಲಾ ಕಾಲೇಜುಗಳ ನೌಕರರಿಗೆ 2006ರ ಮೊದಲಿನ ಅನುದಾನರಹಿತ ಸೇವಾವಧಿಯನ್ನು ಸರಕಾರವು ಪರಿಗಣಿಸಿ ನ್ಯಾಯಾಲಯದ ಆದೇಶದಂತೆ ಸೌಲಭ್ಯವನ್ನು ಒದಗಿಸಿಕೊಡಬೇಕೆಂದು ರಾಜ್ಯ ಖಾಸಗಿ ಶಾಲಾ-ಕಾಲೇಜುಗಳ ನೌಕರರ ಸಂಘದ ಮಂಗಳೂರು ಶಾಖೆ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ದಕ್ಷಿಣ ಕನ್ನಡ ಒಕ್ಕೂಟದ ಅಧ್ಯಕ್ಷ ಗಂಗಾಧರ ಆಳ್ವ ಹೇಳಿದರು.
VETHANA SOULABHYA PHOTO
ತುಂಬೆ ಪ. ಪೂ. ಕಾಲೇಜಿನಲ್ಲಿ ನಡೆದ ಈ ಸಭೆಯಲ್ಲಿ ಸಂಘದ ಕಾರ್ಯದರ್ಶಿ ತಮ್ಮಯ ಗೌಡ ಮಾತನಾಡಿ ನಮಗೆ ಕಡೆಯ ಪಕ್ಷ ಸರಕಾರವು ನಿವೃತ್ತಿ ವೇತನವನ್ನಾದರೂ ನೀಡುವಲ್ಲಿ ದೊಡ್ಡ ಮನಸ್ಸು ಮಾಡಲಿ ಎಂದರು.  ಹೈಕೋರ್ಟ್ ಆದೇಶವನ್ನು ಸರಕಾರ ಪಾಲಿಸುತ್ತಿಲ್ಲ ಆದರೆ ಅತ್ಯಂತ ಕಡಿಮೆ ಆರ್ಥಿಕ ಹೊರೆ ಬೀಳುವ ಪಿಂಚಣಿ ಸೌಲಭ್ಯವನ್ನು ಒದಗಿಸುವಲ್ಲಿ ಸರಕಾರಕ್ಕೆ ಕಷ್ಟವಾಗದು. ಒಂದು ವೇಳೆ ಈ ನಿಟ್ಟಿನಲ್ಲಿ ದೃಢ ನಿಲುವನ್ನು ಸರಕಾರ ತಳೆಯದಿದ್ದರೆ ಅವಿಭಜಿತ ದ. ಕ. ಜಿಲ್ಲೆಯವರು ರಾಜ್ಯ ಸಂಘಟನೆಯ ಜೊತೆ ಸೇರಿ ಮತ್ತೆ ಪಿಂಚಣಿ ಸೌಲಭ್ಯಕ್ಕಾಗಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಬೋಧಕ-ಬೋಧಕೇತರರು ಸೇರಿದ್ದ ಸಭೆಯಲ್ಲಿ ಹೋರಾಟಕ್ಕೆ ಬೆಂಬಲ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ಮೊದಲಿಗೆ ಶ್ರೀನಿವಾಸ ಕೆದಿಲ ಸ್ವಾಗತಿಸಿ, ಯೋಗೀಶ್ ಪ್ರಾರ್ಥನೆಗೈದರು.  ವಿ. ಎಸ್. ಭಟ್ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *