ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಸುಜೀರು ಸರ್ಕಾರಿ ಪ್ರೌಢಶಾಲೆ ತಂಡವು ಪ್ರಥಮ ಸ್ಥಾನ ಗೆದ್ದುಕೊಂಡಿತು.

ಮುಖ್ಯಶಿಕ್ಷಕಿ ಭಗಿನಿ ಉಜ್ವಲ ಎ.ಸಿ., ಉಪನ್ಯಾಸಕ ಸುರೇಶ್ ನಂದೊಟ್ಟು, ಶಿಕ್ಷಕ ರೋಶನ್ ಪಿಂಟೊ, ದೈಹಿಕ ಶಿಕ್ಷಕಿ ಎಲೈಜಾ ಡಿ’ಸೋಜ ಮತ್ತಿತರರು ಇದ್ದಾರೆ.
