ಬಂಟ್ವಾಳ: ಲೋಕೋಪಯೋಗಿ ಇಲಾಖೆ ಬೆಂಗಳೂರು ಇದರ ಮುಖ್ಯ ಇಂಜಿನಿಯರ್ ತ್ಯಾಗರಾಜ್ ಬಿ.ಸಿ.ರೋಡ್ನ ಮಿನಿವಿಧಾನ ಸೌಧ ಕಟ್ಟಡದ ತೀವ್ರಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿ ಗುಣಮಟ್ಟ ಕಾಯ್ದುಕೊಂಡು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಆದೇಶಿಸಿರುತ್ತಾರೆ.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಮಂಗಳೂರು ವೃತ್ತದ ಅಧೀಕ್ಷಕ ಕಾಂತರಾಜ್ , ಕಾರ್ಯಕಾರಿ ಇಂಜಿನಿಯರ್ ಧರ್ಮರಾಜ್ , ಬಂಟ್ವಾಳ ಉಪವಿಭಾಗದ ಕಾರ್ಯಕಾರಿ ಇಂಜಿನಿಯರ್ ಉಮೇಶ್ ಭಟ್, ಸಹಾಯಕ ಇಂಜಿನಿಯರ್ ಜಯಪ್ರಕಾಶ್ , ಇಂಜಿನಿಯರ್ ಅರುಣ್ ಪ್ರಕಾಶ್ , ಪ್ರೀತಂ, ಶ್ರೀಮತಿ ಅರ್ಚನಾ , ಹಾಗೂ ಗುತ್ತಿಗೆದಾರರಾದ ನೌಸೀಲ್, ಸಿದ್ದಿಕ್ ಉಪಸ್ಥಿತರಿದ್ದರು.

