ಮಂಗಳೂರು: ಜುಲೈ28: ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನಲ್ಲಿ ಕಲಾಂಗೆ ಶ್ರದ್ಧಾಂಜಲಿ ಕಾರ್ಯಕ್ರಮ ಮಾಡಲಾಯಿತು. ಎಕ್ಸ್ ಪರ್ಟ್ ಸಂಸ್ಥೆಯ ಅಧ್ಯಕ್ಷರು ಶ್ರೀ ನರೇಂದ್ರ ಎಲ್. ನಾಯಕ್ ಅವರು ಮಾತಾಡಿ ಅಬ್ದುಲ್ ಕಾಲಂ ಅವರ ಜೀವನ ಶೈಲಿ ಮಕ್ಕಳಿಗೆ ನಂತರದ ಬೆಳವಣಿಗೆಗೆ ಪೂರಕವಾದುದು ಎಂದು ಹೇಳಿದರು. ನಂತರ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಉಷಾಪ್ರಭಾ ಎನ್. ನಾಯಕ್ ಮಾತಾಡಿದರು. ಕಾರ್ಯಾಕ್ರಮದಲ್ಲಿ ಪ್ರಾಂಶುಪಾಲರು ರಾಮಚಂದ್ರ ಭಟ್ ಹಾಗೂ ಕಾಲೇಜಿನ ಬಯೋಲೊಜಿ ವಿಷಯದ ಮುಖ್ಯಸ್ಥರು ಪ್ರೋ. ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.
ಮಕ್ಕಳಲ್ಲಿ ಅಬ್ದುಲ್ ಕಾಲಾಂರ ಭಾವಚಿತ್ರ ಸ್ಫರ್ಧೆ ಎರ್ಪಡಿಸಲಾಗಿತ್ತು.













