ಮೂಡುಬಿದರೆ ಮನ್ ಕೀ ಬಾತ್ ಆಕಾಶವಾಣಿ ಕಾರ್ಯಕ್ರಮದಲ್ಲಿ ಪ್ರದಾನಿ ಈ ಬಾರಿ ರಸ್ತೆ ದುರ್ಘಟನೆಯ ಕುರಿತು ಮಾತನಾಡಿದ್ದು, `ಮೂಡುಬಿದಿರೆ’ ಹೆಸರನ್ನು ಉಲ್ಲೇಖಿಸಿದ್ದಾರೆ. ಮೂಡುಬಿದರೆ ಪ್ರಸನ್ನ ಕಾಕುಂಜೆ ಎಂಬವರು ರಸ್ತೆ ಅಪಘಾತದ ಕುರಿತು ತನಗೆ ಸಲಹೆ ನೀಡಿದ್ದಾರೆ ಎಂದು ಮೋದಿ ಮನ್ ಕೀ ಬಾತ್ನಲ್ಲಿ ತಿಳಿಸಿದ್ದಾರೆ.
ಮೂಡುಬಿದರೆಯ ವೈದ್ಯ ಡಾ.ಪ್ರಸನ್ನ ಕಾಕುಂಜೆ ಸಂಚಾರ ನಿಯಮ ಮತ್ತು ರಸ್ತೆ ಸುರಕ್ಷೆ ಕುರಿತು ಜನರಿಗೆ ಸಮರ್ಪಕ, ಪರಿಣಾಮಕಾರಿ ಮಾಹಿತಿ ನೀಡಬೇಕು ಎನ್ನುವ ಸಲಹೆಯನ್ನು ನೀಡಿದ್ದಾರೆ.

ಪ್ರಸನ್ನ ಕಾಕುಂಜ
mbd_ july29_1
ಮೋದಿ ಹೇಳಿದ್ದು:
ದೆಹಲಿಯಲ್ಲಿ ಇತ್ತೀಚೆಗೆ ನಡೆದ ರಸ್ತೆ ಅಪಘಾತದ ದೃಶ್ಯಗಳು ನನ್ನನ್ನು ವಿಚಲಿತಗೊಳಿಸಿದೆ. ನಿಮಿಷಕ್ಕೊಂದು ಅಪಘಾತ, 4ನಿಮಿಷಕ್ಕೊಂದು ಸಾವು ರಸ್ತೆ ದುರ್ಘಟನೆಯಿಂದಾಗುತ್ತಿದೆ. ರಸ್ತೆ ಅಪಘಾತಗಳ ಬಗ್ಗೆ ದೇಶದ ಜನತೆಯಿಂದ ಬಹಳಷ್ಟು ಸಲಹೆಗಳು ವಿವಿಧ ರೀತಿಯಲ್ಲಿ ಕೇಳಿಬರುತ್ತಿದೆ.ಪುಣೆ, ಬೆಂಗಳೂರಿನ ಇಬ್ಬರ ಹೆಸರನ್ನು ಹೇಳಿದ ಬಳಿಕ ಪ್ರದಾನಿ ಮೋದಿ, ಕನರ್ಾಟಕದ `ಮೂಡುಬಿದರೆ’ಯ ಪ್ರಸನ್ನ ಕಾಕುಂಜೆ ಎಂಬವರು ಕೂಡ ಸಲಹೆ ನೀಡಿದ್ದಾರೆ ಎಂದು ಉಲ್ಲೇಘಿಸಿದ್ದಾರೆ.
ಯಾರಿವರು ಪ್ರಸನ್ನ?:
ಮೂಡಬಿದರೆ ಸಮೀಪದ ಗಾಜಿಗಾರ ಪಲ್ಕೆಯಲ್ಲಿ ಆಯುವರ್ೇದ ಆಸ್ಪತ್ರೆಯನ್ನು ನಿರ್ಮಿಸುತ್ತಿದ್ದಾರೆ. ಮೂಲತಃ ಕಾಕುಂಜೆಯವರಾದ ಡಾ.ಪ್ರಸನ್ನ ಕೊಪ್ಪದಲ್ಲಿ ವಿಧ್ಯಾಬ್ಯಾಸ ಪೂರೈಸಿದ್ದಾರೆ.

 

By suddi9

Leave a Reply

Your email address will not be published. Required fields are marked *