ವಿಟ್ಲ ಯುವ ಕುಂಬಾರರ ಯಾನೆ ಕುಲಾಲರ ಸಂಘ ಇವರಿಂದ 4 ನೇ ವರ್ಷದ ವನಮಹೋತ್ಸವ, ಪ್ರತಿಭಾ ಪುರಸ್ಕಾರ, ಉಚಿತ ಪುಸ್ತಕ ವಿತರಣೆ ಹಾಗೂ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮವು ವಿಟ್ಲದ ಮಾದರಿ ಶಾಲೆಯ ಸಭಾ ಭವನದಲ್ಲಿ ನಡೆಯಿತು.
DSC_0035
ಕಾರ್ಯಕ್ರಮದ ಅಧ್ಯಕ್ಷತೆ ಬಂಟ್ವಾಳದ ಸಮಾಜ ಸೇವಾ ಬ್ಯಾಂಕ್ನ ಅಧ್ಯಕ್ಷ ಸುರೇಶ್ ಕುಲಾಲ್ ವಹಿಸಿದ್ದರು. ತೆಂಕ ನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ಡಾ| ದುಗ್ಗಪ್ಪ ಕಜೆಕಾರು ಇವರು ಮುಖ್ಯ ಭಾಷಣ ಕಾರರಾಗಿ ಯುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಸಂಘದ ಕಾರ್ಯವನ್ನು ಶ್ಲಾಗಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ದಾಸ್ ಚಾರಿಟೇಬಲ್ ಟ್ರಸ್ಟ್ (ರಿ), ದಾಸ್ ಪ್ರಮೋಷನ್ ಮತ್ತು ಹೋಂ ನರ್ಸಿಂಗ್ ವರ್ಕ್ರಸ್ನ ಮೇನೇಜಿಂಗ್ ಡೈರೆಕ್ಟರ್ ಅನಿಲ್ ದಾಸ್, ಬಂಟ್ವಾಳ ಸಮಾಜ ಸೇವ ಸಹಕಾರಿ ಬ್ಯಾಂಕ್ನ ಉಪಾಧ್ಯಕ್ಷ ವಿಶ್ವನಾಥ ಕೆ ಬಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಹಿಮೊಪೋಲಿಯಾ ಪೀಡಿತ ಪ್ರತಿಭಾನ್ವಿತ ವಿದ್ಯಾರ್ಥಿ ಗಣದೀಪ್ ರವರನ್ನು ಸನ್ಮಾನಿಸಿ ಪ್ರಸ್ತುತ ವರ್ಷದ ಪದವಿ ಶಿಕ್ಷಣದ ಪ್ರವೇಶ ಶುಲ್ಕವನ್ನು ನೀಡಿ ಪುರಸ್ಕಲಾಯಿತು. 100 ಸ್ವಜಾತಿ ಬಡ ವಿದ್ಯಾರ್ಥಿಗಳಿಗೆ ರೂ 20000 ಮೌಲ್ಯದ ಪುಸ್ತಕ ವಿತರಿಸಲಾಯಿತು. ಸ್ವಜಾತಿ ಬಾಂಧವರು ಮನೆಯಲ್ಲೆ ಮಾಡಿ ತಂದ 35 ಬಗೆಯ ಆಟಿ ತಿಂಡಿಗಳನ್ನು ಎಲ್ಲರೂ ಸವಿದರು. ಸಂಘದ ಅಧ್ಯಕ್ಷ ಉಮೇಶ್ ಕಾಶಿಮಠ ಪ್ರಸ್ತಾವಿಸಿದರು. ವೇದಾವತಿ ಕಟ್ಟೆ ಸ್ವಾಗತಿಸಿದರು. ದೀಪಕ್ ಕಟ್ಟೆ, ವಿನೋದ್ ಕೋಡಿ, ಸೋಮನಾಥ್ ಮಿತ್ತೂರು ನಿರೂಪಿಸಿದರು. ಸಂಘದ ಕಾರ್ಯದರ್ಶಿ ಪದ್ಮನಾಭ ಕಟ್ಟೆ ವಂದಿಸಿದರು.

By Suddi9

Leave a Reply

Your email address will not be published. Required fields are marked *