ಸುದ್ದಿ 9ಬಂಟ್ವಾಳ : ತಾಲೂಕು ಉಳಿ ಗ್ರಾಮದ ಕಕ್ಯಪದವಿನ ಮೈರ ಜಾಲು ನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುವ ದ್ವಿತೀಯ ವರ್ಷದ ಹೊನಲು ಬೆಳಕಿನ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಬೆಳಗ್ಗೆ ಅದ್ಧೂರಿಯ ಚಾಲನೆ ದೊರಕಿತು.
ಮಂಗಳೂರು ಉದ್ಯಮಿ ಮಹಾಬಲ ಪೂಜಾರಿ ಕಡಂಬೋಡಿ ಅವರು ಕಂಬಳವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

kambala
kambala

sammana

1 (3)

ಬಳಿಕ ಕೋಟಿ-ಚೆನ್ನಯ ಸಭಾ ವೇದಿಕೆಯಲ್ಲಿ ಸಭಾಕಾರ್ಯಕ್ರಮವನ್ನು ಕಕ್ಯಪದವು ಶ್ರೀ ಪಂಚದುಗರ್ಾ ದೇವಿ ದೇವಸ್ಥಾನದ ಪ್ರ.ಅರ್ಚಕ ಶ್ರೀನಿವಾಸ ಅಮರ್ುಡ್ತಾಯ ಉದ್ಘಾಟಿಸಿದರು. ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಂಚಾಲಕ ಸತ್ಯಜಿತ್ ಸುರತ್ಕಲ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಕಂಬಳದಂತಹ ಜಾನಪದ ಕ್ರೀಡೆ ಕೃಷಿ ಕಾರ್ಯದಲ್ಲಿ ದುಡಿದು ಬಸವಳಿದವರಿಗೆ ಖುಷಿ -ಸಂಭ್ರಮ ನೀಡುವ ಹಬ್ಬವಾಗಿದೆ.ಆಧುನಿಕತೆಯ ಸೋಂಕಿಲ್ಲದ ಗ್ರಾಮೀಣ ಸೊಗಡಿನ ಈ ಕ್ರೀಡೆ ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದು ಕೃಷಿ ಹಾಗೂ ಕಂಬಳಕ್ಕೆ ಪ್ರಾಧಾನ್ಯತೆ ನೀಡುವ ಮೂಲಕ ತುಳುನಾಡಿನ ಜನತೆ ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿ,ಬೆಳೆಸಬೇಕು.ಮೈರದಂತಹ ತೀರಾಗ್ರಾಮೀಣ ಪ್ರದೇಶದಲ್ಲೂ ಕಂಬಳವನ್ನು ಸಂಘಟಿಸಿದ ಶ್ರೀರಾಮಾಂಜನೇಯ ಗೆಳೆಯರ ಬಳಗದವರ ಶ್ರಮ ಅಭಿನಂದಾರ್ಹವಾಗಿದೆ ಎಂದು ಹೇಳಿದರು.
ವೇ.ಮೂ.ರಾಘವೇಂದ್ರ ಭಟ್ ಕೊಡಂಬೆಟ್ಟು,ಸ್ಥಳದಾನಿ ತುಕ್ರಪ್ಪ ಗೌಡ,ಉದ್ಯಮಿ ಲಕ್ಷ್ಮೀನಾರಾಯಣ ಟಿ.ಎಂ.ಕೊಕ್ಕಡ,ಉಳಿ ಗ್ರಾ.ಪಂ.ಅಧ್ಯಕ್ಷ ಚೆನ್ನಪ್ಪ ಸಾಲ್ಯಾನ್,ಕಕ್ಯಪದವು ದೇವಸ್ಥಾನದ ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ ನಾಯಕ್,ಪ್ರಮುಖರಾದ ಡಾ|ರಾಜಾರಾಮ ಕೆ.ಬಿ.,ಗಣೇಶ ಕೋಂಗುಜೆ,ನರೇಂದ್ರ ರೈ ನೇಲ್ತೊಟ್ಟು ,ಬಾಬು ಗೌಡ ಪೆಂಗರ್ಾಲು,ಪೂವಪ್ಪ ಪೂಜಾರಿ ಕಡಮಾಜೆ,ಶಿವಪ್ಪ ಪೂಜಾರಿ ಹಟದಡ್ಕ ,ಜಗನ್ನಾಥ ಶೆಟ್ಟಿ ,ಚಿದಾನಂದ ರೈ ಕಕ್ಯ,ಸುಧಾಕರ ಶೆಟ್ಟಿ ,ಕೆ.ಹರೀಶ್ಚಂದ್ರ ಪೂಜಾರಿ, ಗುಣಶೇಖರ ಕೊಡಂಗೆ,ಪುಷ್ಪರಾಜ ಶೆಟ್ಟಿ ತೀಪರ್ುಗಾರರಾದ ಎಂ.ರಾಜೀವ ಶೆಟ್ಟಿ ಎಡ್ತೂರು,ಸುಧಾಕರ ಶೆಟ್ಟಿ ಮುಗೆರೋಡಿ, ಕಂಬಳ ಸಮಿತಿ ಪ್ರ.ಕಾರ್ಯದರ್ಶಿ  ಪುರುಷೋತ್ತಮ ಪೂಜಾರಿ,ಕೋಶಾಕಾರಿ ಸುರೇಶ್ ಮೈರ,ಪದಾಕಾರಿಗಳಾದ ಶಿವಾನಂದ ಮೈರ, ,ಪ್ರವೀಣ ಶೆಟ್ಟಿ ಕಿಂಜಾಲು,ಗಣೇಶ್ ಪೂಜಾರಿ,ಪ್ರಮೋದ್ ಸಾಲ್ಯಾನ್,ಸಾಂತಪ್ಪ ಪೂಜಾರಿ,ಪ್ರಕಾಶ್ ಕರ್ಲ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಸಮಿತಿ ಅಧ್ಯಕ್ಷ,ರಾಜ್ಯ ಹಿಂದುಳಿದ ಆಯೋಗಗಳ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿ ಆರ್ಥಿ ಕ ಮುಗ್ಗಟ್ಟಿನಿಂದ ಕಂಬಳಗಳು ನಿಂತು ಹೋಗುತ್ತಿರುವ ಸಮಯದಲ್ಲಿ ಆಧುನಿಕ ವ್ಯವಸ್ಥೆಯೊಂದಿಗೆ ಕಂಬಳ ನಡೆಸಲು ಮುಂದಾಗಿರುವುದು ಅದ್ಭುತ ಕಾರ್ಯವಾಗಿದ್ದು,ಸರಕಾರದ ಹಾಗೂ ಜನರ ಸಹಕಾರ ಅಗತ್ಯ ಎಂದು ಹೇಳಿದರು. ಗೆಳೆಯರ ಬಳಗದ ಅಧ್ಯಕ್ಷ ರಂಜಿತ್ ಮೈರ ವಂದಿಸಿದರು.ಮಾಜಿ ಅಧ್ಯಕ್ಷ ಪುರಂದರ ಕೆ. ನಿರೂಪಿಸಿದರು.ಬಳಿಕ ಓಟದ ಕೋಣಗಳನ್ನು ಸಾಂಪ್ರದಾಯಿಕವಾಗಿ ಕಂಬಳದ ಕರೆಗೆ ಇಳಿಸಲಾಯಿತು.
ಬೆಳಗ್ಗೆ ಕಕ್ಯಪದವು ದೇವಸ್ಥಾನದಿಂದ ಬಕರ್ೆಜಾಲು ಕಂಬಳದ ಕರೆಯವರೆಗೆ ಬ್ಯಾಂಡ್,ವಾದ್ಯ ಸಹಿತ ಆಕರ್ಷಕ ಕಂಬಳದ ಮೆರವಣಿಗೆ ನಡೆಯಿತು.ಸುಮಾರು 120 ಜೋಡಿ ಕೋಣಗಳು ವಿವಿಧ ವಿಭಾಗಗಳ ಸ್ಪಧರ್ೆಯಲ್ಲಿ ಭಾಗವಹಿಸಿದ್ದವು.ವಲೇರಿಯನ್ ಡೇಸಾ,ಜನಾರ್ಧನ ನಾಯ್ಕ ,ಸತೀಶ್ ಹೊಸ್ಮಾರು,ಮಹಾವೀರ ಜೈನ್,ಉಮೇಶ್ ಕಕರ್ೆರ,ಸಂಕಪ್ಪ ಶೆಟ್ಟಿ ನಗ್ರಿ,ಶ್ರೀಧರ ಆಚಾರ್ಯ ಸೀತಾರಾಮ ಶೆಟ್ಟಿ ಅಜೆಕಳ ಕಂಬಳದ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿದರು

By suddi9

Leave a Reply

Your email address will not be published. Required fields are marked *