ಬಂಟ್ವಾಳ: ಭೂ ಕುಸಿತ ಉಂಟಾಗಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಬುಧವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಪಾಯಕ್ಕೆ ಸಿಲುಕಿರುವ ಮನೆಗಳಿಗೂ ಭೇಟಿ ನೀಡಿದ ಡಿಸಿ ಇಲ್ಲಿನ ನಿವಾಸಿಗಳಿಗೆ ತಾತ್ಕಲಿಕ ವಸತಿ ವ್ಯವಸ್ಥೆ ಕಲ್ಪಿಸಲು ಪಿಡಿಓಗೆ ಸೂಚನೆ ನೀಡಿದ್ದಾರೆ. ತಾಲೂಕಾಡಳಿತದ ವತಿಯಿಂದ ಸುಜೀರು ಸಕರ್ಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಆದರೆ ತೊಂದರೆಗೆ ಸಿಲುಕಿರುವ ನಿವಾಸಿಗಳು ಗಂಜಿ ಕೇಂದ್ರಕ್ಕೆ ತೆರಳಲು ನಿರಾಕರಿಸಿದ್ದು ತಮ್ಮ ಸಂಬಂಧಿಗಳ ಮನೆಗೆ ಹೋಗುವುದಾಗಿ ಹೇಳಿದ್ದಾರೆ. ಈ ಸಂದರ್ಭ ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ.ಕಾರ್ಯನಿವರ್ಾಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ, ಕಂದಾಯಾಧಿಕಾರಿ ನಾರಾಯಣ ಪೂಜಾರಿ, ಗ್ರಾಮಕರಣಿಕ ಪ್ರದೀಪ್, ಜಿ.ಪಂ. ಸಹಾಯಕ ಕಾರ್ಯಪಾಲ ಅಭಿಯಂತರ ನರೇಂದ್ರಬಾಬು, ಕಿರಿಯ ಎಂಜಿನಿಯರ್ ರವಿಚಂದ್ರ ಹಾಜರಿದ್ದರು.
3

 

4

 

5

2 (1)
ಜಿ.ಪಂ. ಮಾಜಿ ಸದಸ್ಯ ಉಮ್ಮರ್ ಪಾರೂಕ್, ಪುದು ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷೆ ಮಹಮ್ಮದ್ ಶರೀಫ ಸದಸ್ಯರಾದ ಮಹಮ್ಮದ್ ಹಾಶೀರ್, ಖಾದರ್ ಪಾವೂರು, ಅಖ್ತರ್ ಹುಸೈನ್ ಮೊದಲಾವರು ಸ್ಥಳದಲ್ಲಿದ್ದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಮತ್ತೆ ಭೂ ಕುಸಿತ:
ಮಂಗಳವಾರ ಮಧ್ಯಾಹ್ನದ ವೇಳೆ ಏಕಾಏಕಿ ಮಣ್ಣು ಕುಸಿದು ಮೂರು ಮಂದಿ ಮೃತಪಟ್ಟ ಮೇಲೆ ರಾತ್ರಿ 11 ಗಂಟಯ ವೇಳಗೆ ಮತ್ತೆ ಮಣ್ಣು ಕುಸಿದು ಬಿದ್ದಿದೆ. ಮಧ್ಯರಾತ್ರಿಯ ಬಳಿಕ ಸುರಿದ ಬಾರೀ ಮಳಗೆ ಮುಂಜಾನೆ ಮೂರು ಗಂಟೆಯ ವೇಳೆಗೂ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದಿದ್ದು ತಳಬಾಗವನ್ನು ಸಮತಟ್ಟುಗೊಳಿಸಿದೆ. ಬುಧವಾರ ಮಳೆ ಅಬ್ಬರ ಹೆಚ್ಚಾಗಿದ್ದು ಮತ್ತಷ್ಟು ಭೂ ಕುಸಿತ ಉಂಟಾಗುವ ಲಕ್ಷಣ ಎದುರಾಗಿದೆ.

By suddi9

Leave a Reply

Your email address will not be published. Required fields are marked *