ಬಂಟ್ವಾಳ: ಬೈಕ್ ಗಳೆರಡು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಮೂಡಬಿದಿರೆ-ಬಂಟ್ವಾಳ ಹೆದ್ದಾರಿಯ ಸಿದ್ಧಕಟ್ಟೆ ಸಮೀಪ ಕುದ್ಕೋಳಿ ಎಂಬಲ್ಲಿ ಜು.12ರಂದು ರಾತ್ರಿ ಸಂಭವಿಸಿದೆ.
ಕುದ್ಕೋಳಿ ನಿವಾಸಿ ಲೋಕಯ ಗೌಡ ಅವರ ಪುತ್ರ ಸುಂದರ ಗೌಡ(22) ಮೃತಪಟ್ಟ ದುರ್ದೆವಿ.

ಸಾಂದರ್ಭಿಕ ಚಿತ್ರ

download (2)

ಅವರು ಅಡಿಕೆ ಸುಲಿಯುವ ಕಾರ್ಮಿಕರಾಗಿದ್ದರು. ಸುಂದರ ಗೌಡ ಅವರು ರವಿವಾರ ಸುಮಾರು 10.30ಕ್ಕೆ ಸಿದ್ಧಕಟ್ಟೆಯಿಂದ ಕುದ್ಕೋಳಿಯ ತನ್ನ ಮನೆಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಸಿದ್ಧಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಬಳಿ ಎದುರುಗಡೆಯಿಂದ ಬಂದ ಬೈಕ್ಗೆ ಢಿಕ್ಕಿಯಾಗಿತ್ತು. ಅಪಘಾತದಲ್ಲಿ ತೀವ್ರ ಗಾಯಗೊಂಡ ಅವರನ್ನು ತತ್ಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯ ಮೃತಪಟ್ಟಿದ್ದರು. ಇನ್ನೊಂದು ಬೈಕ್ನ ಸವಾರ ಕುಕ್ಕಿಪಾಡಿಯ ಪ್ರಶಾಂತ್ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

By Suddi9

Leave a Reply

Your email address will not be published. Required fields are marked *