ಮೂಡುಬಿದಿರೆ:ಮುಂಗಾರು ಮಳೆ ಕ್ಷೀಣಿಸಿದ ಹಿನ್ನೆಲೆಯಲ್ಲಿ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆ ಸಾರ್ವಜನಿಕರಿಂದ ಮಳೆಗಾಗಿ ವಿಶೇಷ ಪ್ರಾರ್ಥನೆ, ಬಳಿಕ ಸೀಯಾಳಾಭಿಷೇಕ ನಡೆಯಿತು.
ದೇವಳದ ಪ್ರಧಾನ ಅರ್ಚಕ ದತ್ತಾತ್ರೇಯ ಭಟ್ ಮತ್ತು ಶ್ರೀನಿಧಿ ಪುತ್ತಿಗೆ ಇವರು ವೀರಮಾರುತಿಗೆ ವಿಶೇಷ ಪೂಜೆ ಮಾಡಿ ಬಳಿಕ ಸೀಯಾಳಾಭಿಷೇಕ ನಡೆಸಿಕೊಟ್ಟರು.

ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭೆ ಸದಸ್ಯ ರಾಜೇಶ್ ಕೋಟೆಗಾರ್, ಮಾಜಿ ಸದಸ್ಯ ವಿಜಯ ಕುಮಾರ್, ಮಾಜಿ ಮಂಡಲ ಮಂಚಾಯತ್ ಸದಸ್ಯ ಎಂ. ವಸಂತ ಶೆಟ್ಟಿ, ರಾಜೇಶ್ ಕುಮಾರ್, ದೇವಸ್ಥಾನದ ಕಾರ್ಯದರ್ಶಿ ಪ್ರಸನ್ನ ಹೆಗ್ಡೆ, ಹಿರಿಯ ಮೊಕ್ತೇಸರ ಶ್ಯಾಮ ಹೆಗ್ಡೆ, ಶ್ರೀಧರ ಹೆಗ್ಡೆ, ಹಿರಿಯರಾದ ಸೂರ್ಯಣ್ಣ ಹೆಗ್ಡೆ, ಮನೇಜರ್ ರಾಘವ ಹೆಗ್ಡೆ,ಹೆಗ್ಗಡೆ ಸಂಘದ ಸುಧಾಕರ ಹೆಗ್ಡೆ ಮತ್ತಿತರರು ಭಾಗವಹಿಸಿದರು. ಸುಮಾರು ನಾಲ್ಕುನೂರು ಸೀಯಾಳಗಳು ಸಾರ್ವಜನಿಕರಿಂದ ಸೇವಾರೂಪದಲ್ಲಿ ಬಂದಿದ್ದವು.
