ಕೈಕಂಬ: ಭಾರತೀಯ ಜನತಾ ಪಾರ್ಟಿ ಉಳಾಯಿಬೆಟ್ಟು ಸ್ಥಾನೀಯ ಸಮಿತಿ ಇದರ ವತಿಯಿಂದ ಉಳಾಯಿಬೆಟ್ಟು ಗ್ರಾಮಪಂಚಾಯತಿಗೆ ಸತತ ಎರಡನೇ ಭಾರಿ ಬಿಜೆಪಿ ಬೆಂಬಲಿತ ಸದಸ್ಯರನ್ನು ಗೆಲುವು ತಂದುಕೊಟ್ಟ ಕಾರ್ಯಕರ್ತರಿಗೆ ಹಾಗೂ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನಾ ಸಮಾರಂಭವು ಜು.12ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ಪೆರ್ಮಂಕಿ ಸದಾಶಿವ ದೇವಸ್ಥಾನದ ವಠಾರದಲಿ ಜರಗಲಿದೆ.
ಸಮಾರಂಭದಲ್ಲಿ ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ , ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್, ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷ ಹರೀಶ್ ಕುಮಾರ್ಪೆರ್ಮಂಕಿ ದೇವಳದ ಆಡಳಿತ ಮೊಕ್ತೇಸರ ಪದ್ಮನಾಭ ಶೆಟ್ಟಿ, ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಸೇವಾಸಮಿತಿಯ ಅಧ್ಯಕ್ಷ ಗಂಗಾಧರ ಮಾಸ್ಟರ್ ಮತ್ತಿತರು ಭಾಗವಹಿಸಲಿದ್ದಾರೆ ಎಂದು ಉಳಾಯಿಬೆಟ್ಟು ಸ್ಥಾನೀಯ ಸಮಿತಿ ಪ್ರಕಟನೆ ತಿಳಿಸಿದೆ.

