ಮೂಡುಬಿದಿರೆ: ಮೂಡುಬಿದಿರೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೆಳಚ್ಚಾರು ಎಂಬಲ್ಲಿ ಅಪರಿಚಿತ ತಂಡವೊಂದು ಅಂಕವಿಕಲ ವ್ಯಕ್ತಿ ಹಾಗೂ ಬಸ್ ಚಾಲಕರೊಬ್ಬರಿಗೆ ಶನಿವಾರ ಮಧ್ಯಾಹ್ನ ಹಲ್ಲೆ ನಡೆಸಿದೆ.
ಮಿಜಾರಿನ ಉರ್ಕಿ ಎಂಬಲ್ಲಿನ ನಿವಾಸಿ, ಅಂಕವಿಕಲ ವ್ಯಕ್ತಿ ಸಂದೀಪ್(27) ಹಾಗೂ ಬಸ್ ಚಾಲಕ ಹಿಮಕರ್( ಹರೀಶ್) ಎಂಬವರು ಹಲ್ಲೆಗೊಳಾಗದವರು. ಮಿಜಾರು ಬೆಳ್ಳಚಾರಿನಲ್ಲಿ ಈ ಇಬ್ಬರು ರಸ್ತೆ ಬದಿಯಲ್ಲಿ ನಿಂತಿದ್ದು, ಸುಮಾರು 15ರಿಂದ 20 ಮಂದಿಯ ತಂಡವೊಂದು ಬಂದು ಮೊದಲು ಹಿಮಕರ್ ಅವರಿಗೆ ಹಲ್ಲೆ ನಡೆಸಿದೆ. ಅಲ್ಲೇ ಪಕ್ಕದಲ್ಲಿ ನಿಂತಿದ್ದ ಅಂಗವಿಕಲ ಸಂದೀಪ್ ಅವರನ್ನು ಗಮನಿಸಿ, ಅವರಿಗೂ ಹೆಲ್ಮೆಟ್ನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾಗಿ ಕುಸಿದ ಬಿದ್ದ ಸಂದೀಪ್ ಗೆ ಬೂಟಿನಿಂದ ಒದೆದಿದ್ದಾರೆ.

ಇದರ ಮೊದಲು ಎಡಪದವಿನಲ್ಲಿ ಶನಿವಾರ ಮಧ್ಯಾಹ್ನದ ವೇಳೆಗೆ ಪಾದಚಾರಿಯೊಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದದ್ದು, ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಡಿಕ್ಕಿ ಹೊಡೆದವರ ನಡುವೆ ಮಾತಿನ ಚಕಾಮಕಿ ಉಂಟಾಗಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಡಿಕ್ಕಿ ಮಾಡಿದ ಕಾರಿನವರು ತಂಡದೊಂದಿಗೆ ಮಿಜಾರಿನ ಬೆಳ್ಳಚಾರಿನಲ್ಲಿ ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ.
ಗಾಯಾಳುಗಳನ್ನು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾರೆ.



