ಬಜ್ಪೆ: ಗುರುಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೇಸ್ ಪಕ್ಷದ ಬೆಂಬಲಿತ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮ ಇತ್ತೀಚಿಗೆ ಕೈಕಂಬ ಮೇಘಾಪ್ಲಾಜಾದಲ್ಲಿ ನಡೆಯಿತು.
ಈ ಸಂದರ್ಭ ಗಂಜಿಮಠ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ,ಉಪಾಧ್ಯಕ್ಷ ಆರ್.ಎಸ್ ಝಾಕೀರ್,ಸದಸ್ಯರಾದ ಸುನೀಲ್ ಜಿ,ದಯಾನಂದ ಕುಲಾಲ್,ಶಿವಪ್ಪ, ಜಹೂರ್, ರಝಾಕ್ ಮುಂತಾದವರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್,ಬೋಸ್ಲಂ ಫೆರ್ನಾಂಡಿಸ್, ಜಿಲ್ಲಾ ಕಾಂಗ್ರೇಸ್ ಹಂಗಾಮಿ ಅಧ್ಯಕ್ಷ ಹಾಜಿ ಕೋಡಿಜಾಲ್ ಇಬ್ರಾಹಿಂ, ಶಾಸಕ ಬಿ.ಎ ಮೊದೀನ್ ಬಾವ, ಗುರುಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆರ್.ಕೆ ಪೃಥ್ವಿರಾಜ್, ಧರಣೇಂದ್ರ ಕುಮಾರ್, ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಎಂ.ಎಸ್ ಮಹಮ್ಮದ್,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣ ಅಮೀನ್, ಗುರುಪುರ ಬ್ಲಾಕ್ ಕಾಂಗ್ರೇಸ್ ಹಿಂದುಳಿದ ವರ್ಗದ ಅಧ್ಯಕ್ಷ ಗಣೇಶ್ ಪೂಜಾರಿ,ಪದ್ಮನಾಭ ನರಿಂಗಾನ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಂ.ಹನೀಫ್, ಕಾಂಗ್ರೇಸ್ ಯುವ ಮುಖಂಡ ಗಿರೀಶ್ ಆಳ್ವ, ಜಿಲ್ಲಾ ಪಂಚಾಯಿತಿ ಸದಸ್ಯ ಮೆಲ್ವಿನ್ ಡಿಸೋಜ ನೀರುಮಾರ್ಗ, ತಾಲೂಕು ಪಂಚಾಯಿತಿ ಸದಸ್ಯ ಜೋನ್ಸನ್ ಲೋಬೋ,ಸೆಲಿನ್ ಫೆರ್ನಾಂಡೀಸ್,ನೋಬರ್ಟ್ ಮಥಾಯಿಸ್,ಯೂಸೂಫ್ ಉಳಾಯಿಬೆಟ್ಟು, ಗಿರಿಯಪ್ಪ,ಅಬ್ದುಲ್ ಅಜೀಜ್ ಬಾಷಾ, ಯು.ಪಿ.ಇಬ್ರಾಹಿಂ, ಫ್ಲೇವಿಯ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.
