ಮೂಡುಬಿದಿರೆ : ಮಾಧ್ಯಮಗಳು ಸತ್ಯ ಮತ್ತು ಭಾಷಾ ಶುದ್ಧತೆಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕು ಎಂದು ಉದಯವಾಣಿ ಪತ್ರಿಕೆಯ ಹಿರಿಯ ಉಪಸಂಪಾದಕರಾದ ನಿತ್ಯಾನಂದ ಪಡ್ರೆ ಹೇಳಿದರು.
ಅವರು ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ವತಿಯಿಂದ ನಡೆದ ಸೆಮಿನಾರ್ ಹಾಲ್ನಲ್ಲಿ “ಪತ್ರಿಕಾ ದಿನಾಚರಣೆ” ಸಮಾರಂಭವನ್ನು ಉದ್ಘಾಟಿಸಿ ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಹೊರ ತಂದಿರುವ “ಆಳ್ವಾಸ್ ಮಿರರ್” ಸಂಚಿಕೆಯಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪತ್ರಿಕೆಗಳು ಪ್ರಭುಶಕ್ತಿ, ಆರ್ಥಿಕ ಶಕ್ತಿ, ಭಾವಾನಾತ್ಮಕ ಶಕ್ತಿ, ಮತ್ತು ಭೌತಿಕ ಶಕ್ತಿಯ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿದ್ದು ಇದು ಆಪಾಯಕಾರಿಯಾಗಿದೆ ಎಂದು ಹೇಳಿದ ಪಡ್ರೆ ಅವರು ದೃಶ್ಯ, ರೇಡಿಯೋ ಮತ್ತು ಪತ್ರಿಕಾ ಮಾಧ್ಯಮಗಳು ಇಂದು ಎಷ್ಟು ಪ್ರಭಾವಶಾಲಿಯಾಗಿದೆ ಮತ್ತು ಇಲ್ಲಿ ಆಗುವಂತಹ ಸಣ್ಣಪುಟ್ಟ ತಪ್ಪುಗಳು ಯಾವ ರೀತಿಯ ಪರಿಣಾಮವನ್ನು ಉಂಟು ಮಾಡಬಲ್ಲದು ಎಂಬುದರ ಕುರಿತಾಗಿ ಹೇಳಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೋ. ಕುರಿಯನ್ ಅಧ್ಯಕ್ಷತೆಯನ್ನು ವಹಿಸಿ ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಪ್ರಾಯೋಗಿಕ ಬಿತ್ತಿ ಪತ್ರಿಕೆಯಾದ “ಸುದ್ದಿಮನೆ”ಯನ್ನು ಬಿಡುಗಡೆ ಮಾತನಾಡಿ ಪತ್ರಿಕೆಗಳ ವಾಚಾಳಿತನ ದೊಡ್ಡ ಸಮಸ್ಯೆಯಾಗಿದೆ. ಪತ್ರಿಕೋದ್ಯಮದಲ್ಲಿ ಗಂಭೀರತೆ ಮತ್ತು ಶಿಸ್ತು ಮುಖ್ಯವಾಗಬೇಕು ಎಂದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಮೌಲ್ಯ ಜೀವನ್ರವರು ಸ್ವಾಗತಿಸಿದರು. ವಿದ್ಯಾರ್ಥಿನಿ ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಶ್ರೀನಿವಾಸ ಪೆಜತ್ತಾಯ ವಂದಿಸಿದರು.

