ಬಂಟ್ವಾಳ : ತಾಲೂಕಿನ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯ ಶ್ರೀ ಶಾರದಾ ಯಕ್ಷ ಕಲಾ ಕೇಂದ್ರದಲ್ಲಿಯಕ್ಷಗಾನ ತರಬೇತಿ ತರಗತಿ ಉದ್ಘಾಟನಾ ಕಾರ್ಯಕ್ರಮ ಜೂ.23ರಂದು ಜರಗಿತು.
ಶಾಲಾ ಸಂಚಾಲಕ ಎಂ.ಜನಾರ್ಧನ ಭಟ್ ಅವರು ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಯಕ್ಷಗಾನ ನಾಟ್ಯ ಕಲೆಯನ್ನು ಕಲೆತರೆ ಕಲಾ ದೇವರ ಸೇವೆ ಮಾಡಿದಂತಾಗುತ್ತದೆ. ಯಕ್ಷಗಾನ ಕಲೆಯು ಪ್ರತಿಭೆಗೆ ಪ್ರೋತ್ಸಾಹಕವಾಗಿದೆ ಎಂದು ಹೇಳಿದರು.

ಯಕ್ಷಗುರು ಸತೀಶ್ ಮಡಿವಾಳ ಅವರು ಮಾತನಾಡಿ ಯಕ್ಷಗಾನ ತರಬೇತಿಯಲ್ಲಿ ವಿದ್ಯಾರ್ಥಿಗಳು ಶಿಸ್ತು , ಆಚಾರ-ವಿಚಾರ ವಾಕ್ಚಾತುರ್ಯ ಹಾಗೂ ಶಾರೀರಿಕ ವ್ಯಾಯಾಮ ಪಡೆದಂತಾಗುತ್ತದೆ. ಈ ಕಲೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ತಮಪಡಿಸಲು ಮತ್ತು ಪ್ರತಿಭೆಯನ್ನು ಪ್ರಕಟಿಸಲು ವೇದಿಕೆಯು ಸಿಕ್ಕಿದಂತಾಗುತ್ತದೆ ಎಂದರು. ಶಾಲಾ ಮುಖ್ಯಶಿಕ್ಷಕಿ ಭಾರತಿ ಅವರು ಯಕ್ಷಕಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಕ ವೃಂದ, ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.
ಶ್ರೀ ಶಾರದಾ ಯಕ್ಷ ಕಲಾ ಕೇಂದ್ರದ ನಿರ್ದೇಶಕ ಶಿವಪ್ಪ ನಾಯ್ಕ ಅವರು ಸ್ವಾಗತಿಸಿದರು. ಶಿಕ್ಷಕಿ ಯಶೋಮತಿ ವಂದಿಸಿದರು. ಪರಮೇಶ್ವರ ಜಿ.ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
