ಮೂಡುಬಿದರೆ: ಕ್ವಾರೆ ಗುಂಡಿ ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಸಾವು-ನೋವು ತಡೆಯಲು ಮುನ್ನೆಚ್ಚರಿಕೆ ಮತ್ತು ತಂತಿ ಬೇಲಿ, ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲು ಸರ್ಕಾಋ ಸುತ್ತೋಲೆ ಹೊರಡಿಸಿದ್ದು, ಇದನ್ನು ಕಡೆಗಣಿಸಿದರೆ ಕ್ರಿಮಿನಲ್ ಮೊಕದ್ದಮೆ ಎದುರಿಸಬಹುದೆಂದು ಮೂಡುಬಿದರೆ ತಹಸೀಲ್ದಾರ್ ಮಹಮ್ಮದ್ ಇಸಾಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಡುಬಿದರೆ ಹೋಬಳಿ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆಸಿ ಉಂಟಾದ ಕ್ವಾರಿ ಗುಂಡಿಗಳನ್ನು ಈ ಆದೇಶ ಹೊರಡಿಸಿದ 7 ದಿನಗಳೊಳಗೆ ಸಂಬಂಧಪಟ್ಟವರು ಮುಚ್ಚುವುದು ಇಲ್ಲವೇ ಶಾಶ್ವತ ತಡೆಬೇಲಿ ನಿರ್ಮಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಅಲ್ಲದೇ ಈ ಬಾಬ್ತು ಸಂಭವಿಸಿದ ಎಲ್ಲಾ ನಷ್ಟಗಳಿಗೂ ಸಂಬಂಧಪಟ್ಟವರನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು. ಯಾವುದೇ ಅನಾಹುತಗಳಿಗೆ ಸರ್ಕಾರಿ ಮತ್ತು ಖಾಸಗಿ ಜಮೀನಿನಲ್ಲಿ ಗುತ್ತಿದಾರರು ಮತ್ತು ಭೂ ಮಾಲಿಕರು ಇಬ್ಬರೂ ಜವಾಬ್ದಾರರಾಗಿರುತ್ತಾರೆ ಎಂದು ತಹಸೀಲ್ದಾರ್ ಸೂಚನೆ ನೀಡಿದ್ದಾರೆ.

By Suddi9

Leave a Reply

Your email address will not be published. Required fields are marked *