ಮಂಗಳೂರು: ಕದ್ರಿಕಂಬಳದ `ಇಲೈಟ್ ಅಪಾಟರ್್ಮೆಂಟ್’ನ ಶೆಡ್ನಲ್ಲಿ ನಸುಕಿನ ಜಾವ ನಡೆದ ನಿಗೂಢ ಸ್ಫೋಟಕ್ಕೆ ಬಾಲಕಿ ಬಲಿಯಾಗಿ ಒಂದೇ ಕುಟುಂಬದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಘಟನೆಯಿಂದ ಫ್ಲಾಟ್ ಸಂಪೂರ್ಣವಾಗಿ ಅದುರಿಹೋಗಿದ್ದು ಕಿಟಕಿ ಬಾಗಿಲು ಪುಡಿಪಡಿಯಾಗಿದೆ.

ಫ್ಲಾಟ್ನ ವಾಚ್ಮೆನ್ ಆಗಿರುವ ಹಾವೇರಿ ಮೂಲದ ಶಿವಾನಂದ (55) ಪತ್ನಿ ಭಾಗ್ಯ(45) ಹಾಗೂ ಮಕ್ಕ ಳಾದ ಭಾರತಿ(14), ಆಂಜನೇಯ(8) ಜೊತೆ ಪಕ್ಕದ ಶೆಡ್ನಲ್ಲಿ ವಾಸ್ತವ್ಯವಿದ್ದರು. ಇಂದು ನಸುಕಿನ 4:30ರ ಸುಮಾರಿಗೆ ಅಪಾಟರ್್ಮೆಂಟ್ ನಿವಾಸಿಗಳಿಗೆ ಭಾರೀ ಸದ್ದು ಕೇಳಿಸಿದ್ದು, ಕೆಳಗಡೆ ಓಡೋಡಿ ಬರುವಾಗ ಶೆಡ್ ಕುಸಿದು ಬಿದ್ದಿತ್ತು. ದಂಪತಿ ಹಾಗೂ ಮಕ್ಕಳು ಸುಟ್ಟ ಗಾಯಗಳೊಂದಿಗೆ ಕಟ್ಟಡದ ಅವಶೇಷ ದಡಿಯಲ್ಲಿ ಸಿಕ್ಕಿಬಿದ್ದಿದ್ದರು. ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಾರ್ವಜನಿಕರು ಕಾಯರ್ಾಚರಣೆ ನಡೆಸಿ ಗಂಭೀರ ಗಾಯಗೊಂಡವರನ್ನು ಕಟ್ಟಡದ ಅವಶೇಷದ ಅಡಿಯಿಂದ ಹೊರಕ್ಕೆಳೆದು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ ಭಾರತಿ ಮೃತಪಟ್ಟಳು. ಮೂವರಿಗೂ ದೇಹದ ಮೇಲ್ಭಾಗಕ್ಕೆ ಸುಟ್ಟಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಘಟನೆಗೆ ಗ್ಯಾಸ್ ಸಿಲಿಂಡರ್ ಸ್ಫೋಟವೇ ಕಾರಣ ಎಂದು ಹೇಳಲಾಗುತ್ತಿದ್ದರೂ ಅಗ್ನಿಶಾಮಕದಳ ಅಧಿಕಾರಿಗಳು ಮತ್ತು ಪೊಲೀಸರು ಇದನ್ನು ನಿರಾಕರಿಸಿದ್ದಾರೆ. ಯಾಕೆಂದರೆ ಘಟನಾಸ್ಥಳದಲ್ಲಿ ಯಾವುದೇ ಹಾನಿಯಾಗದ ಸ್ಥಿತಿಯಲ್ಲಿ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದೆ. ಗ್ಯಾಸ್ ಲೀಕೇಜ್ ಇದ್ದು ರೂಮಿನೊಳಗಡೆ ಗ್ಯಾಸ್ ತುಂಬಿಕೊಂಡಿದ್ದರಿಂದ ನಸುಕಿನ ಜಾವ ಬೆಂಕಿಕಡ್ಡಿ ಗೀರುವಾಗ ಇಲ್ಲವೇ ವಿದ್ಯುತ್ ಉಪಕರಣಗಳ ಸ್ವಿಚ್ ಅದುಮುವಾಗ ಬೆಂಕಿ ತಗಲಿ ಸ್ಫೋಟ ಸಂಭವಿಸಿರಬೇಕು ಎಂದು ಶಂಕಿಸಲಾಗಿದೆ. ಅಲ್ಲದೆ ಸ್ಫೋಟಕ್ಕೆ ಏನು ಕಾರಣ ಎಂದೂ ತಿಳಿದುಬಂದಿಲ




