ಉಡುಪಿ: ಉಡುಪಿ – ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ನೀರೆಜೆಡ್ಡು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರು ಪಶ್ಚಿಮ ವಲಯದ ಎಸಿಪಿ ಲಾಬೂರಾಮ್ ಅವರ ಪತ್ನಿ ಗಾಯತ್ರಿ ಮತ್ತು ಜೀಪ್ ಚಾಲಕ ನಟರಾಜ್ ಮೃತಪಟ್ಟಿದ್ದಾರೆ. ಲಾಬೂರಾಮ್ ಅವರ ಪತ್ನಿ ಇದ್ದ ವಾಹನ ಧರ್ಮಸ್ಥಳದಿಂದ ಉಡುಪಿ ಕಡೆಗೆ ಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಲಾಬೂರಾಮ್ ಕುಟುಂಬ ಪ್ರಯಾಣಿಸುತ್ತಿದ್ದ ಬೊಲೆರೋಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

20140402_152819

ಪೊಲೀಸ್ ಪೇದೆ ನಟರಾಜು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದು ಗಾಯತ್ರಿ ಅವರು ಆಸ್ಪತ್ರೆಗೆ ಸಾಗಿಸುತ್ತಿದ್ ವೇಳೆ ಪ್ರಾಣ ಕಳೆದುಕೊಂಡಿದ್ದಾರೆ. ಲಾಬೂರಾಮ್ ಅವರ ಮಕ್ಕಳಾದ ಹರಿತ(15), ಸುನೀತ(13) ಮತ್ತು ಪೊಲೀಸ್ ಪೇದೆ ರಮೇಶ್ ದೇಶ್ ಪಾಂಡೆ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಾಖಲಿಸಲಾಗಿದೆ.

By suddi9

Leave a Reply

Your email address will not be published. Required fields are marked *