ಮಂಗಳೂರು: ಶಾಸಕ ಜೆ. ಆರ್. ಲೋಬೊ ಇವರ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಸಮಿತಿಯು ಕಾರ್ ಸ್ಟ್ರೀಟ್ ನಲ್ಲಿರುವ ಸರಕಾರಿ ಮಹಿಳಾ ಜೂನಿಯರ್ ಕಾಲೇಜ್ ಹಾಗು ಪ್ರೌಡ ಶಾಲೆ ಇದರ ಕಳೆದ ಶೈಕ್ಷಣಿಕ ವರ್ಷದ ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿದರು.
DC meeting

IMG_6275

IMG_6276
ಹಿಂದಿನ ಶೈಕ್ಷಣಿಕ ವರ್ಷಕ್ಕಿಂತ 2% ಹೆಚ್ಚು ಫಲಿತಾಂಶ ಜಾಸ್ತಿ ಬಂದಿದಾಗಿ ಕಾಲೇಜು ಪ್ರಾಂಶುಪಾಲರು ಸಭೆಯಲ್ಲಿ ತೀಳಿಸಿದರು. ಸುಮಾರು 10 ಲಕ್ಷ ರೂಪಾಯಿ ಅನುದಾನದಲ್ಲಿ ಶಾಸಕರ ನಿಧಿಯಿಂದ ಪೂರ್ಣಗೊಂಡ ಹೊಸ ಕಟ್ಟಡವನ್ನು ಶಾಲಾ ಕಚೇರಿ ಹಾಗು ಗ್ರಂಥಲಯಕ್ಕೆ ಬಳಸಲಾಗುವುದು ಎಂದು ಹೇಳಿದರು. ಶಾಲೆಯ ನಿರ್ವಹಣೆ ಖಚರ್ು-ವೆಚ್ಚದ ಅದಾಂಜು ಪಟ್ಟಿ ತಯಾರಿಸಲು ಹಾಗು ಕಾಲೇಜಿಗೆ ಗಣಕಯಂತ್ರ ಕೊಡುವುದಾಗಿ ಶಾಸಕರು ಸಭೆಯಲ್ಲಿ ತೀಳಿಸಿದರು.
ಬಳಿಕ ಶಾಲೆಯ ವಿಜ್ಙಾನ ಪ್ರಯೋಗಲಯವನ್ನು ಪರಿಶೀಲಿಸಿ, ನವಿಕರೀಸುವ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ಎಲ್ವಿರಾ ಫಿಲೊಮಿನಾ, ರಾಜ್ ದೇವಿ, ಪೋಷಕರು ಹಾಗು ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *