ಮೂಡುಬಿದರೆ: ಹಂಡೇಲು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ, ಅಂತಾರಾಷ್ಟ್ರೀಯ ಕರಾಟೆಪಟು ಹರ್ಷಾ ಯು.ಕೋಟ್ಯಾನ್ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಹಂಡೇಲಿನ ಮುಸ್ಲಿಂ ವೆಲ್ಫೇರ್ ಅಸೋಶಿಯೇಶನ್ ವತಿಯಿಂದ ಪುಸ್ತಕ ವಿತರಣಾ ಸಮಾರಂಭ ಮಂಗಳವಾರ ನಡೆಯಿತು.
ಮೂಡುಬಿದರೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ, ಹರ್ಷಾ ಕೋಟ್ಯಾನ್ ಅವಳಂತಹ ಪ್ರತಿಭೆ* ಗಳು ಸರ್ಕಾರಿ ಶಾಲೆಯಲ್ಲಿ ಚಿಗುರುತ್ತಿದೆ. ಅವರನ್ನು ಸರಿಯಾದ ರೀತಿಯಲ್ಲಿ ಪ್ರೋತ್ಸಾಹಿಸಿ ಅರಳಿಸುವ ಪ್ರಯತ್ನ ಮಾಡಬೇಕು ಎಂದರು.
ಹಂಡೇಲು ಶಾಲೆಯಲ್ಲಿ ಕರಾಟೆಪಟು ಹರ್ಷಾ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು

ಮೂಡುಬಿದರೆ ಪ್ರೆಸ್ ಕ್ಲಬ್ ಅಧ್ಯಕ್ಷ ಎಂ.ಗಣೇಶ್ ಕಾಮತ್ ಮುಖ್ಯ ಅತಿಥಿಯಾಗಿ ಮಾತನಾಡಿ, ಸರ್ಕಾರಿ ಶಾಲೆಗೆ ಹೆಮ್ಮೆ ಪಡಬೇಕು. ಇಂದು ಸರ್ಕಾರಿ ಶಾಲೆಗಳನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಇಲ್ಲಿರುವ ನೈಜ್ಯ ಪ್ರತಿಭೆಗಳನ್ನು ಗುರುತಿಸುವ ಕೆಲಸಗಳು ನಿರಂತರವಾಗಿ ನಡೆಯಬೇಕು. ಪ್ರದಾನಿಯವರ ಗ್ರಾಮ ದತ್ತು ಯೋಜನೆಗೆ ಪೂರಕವಾಗಿ ಪಂಚಾಯಿತಿ ಸದಸ್ಯರು ತಮ್ಮ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಅಗತ್ಯ ಮುಂದಾಗಬೇಕು ಎಂದರು
ಮೂಡುಬಿದರೆ ವಲಯ ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಸದಸ್ಯ ಪ್ರಕಾಶ್.ಪಿ, ಮುಸ್ಲಿಂ ವೆಲ್ಫರ್ ಅಸೋಸಿಯೇಶನ್ನ ಅಧ್ಯಕ್ಷ ಅಬ್ದುಲ್ ಸಲೀಂ, ಶಿಕ್ಷಣ ಸಂಯೋಜಕ ದಿನೇಶ್ ,ಪುತ್ತಿಗೆ ಗ್ರಾ.ಪಂ ಸದಸ್ಯರಾದ ಶಶಿಧರ ನಾಯಕ್, ಗಿರೀಶ್ ಕುಮಾರ್, ಮೋಹಿನಿ ಶೆಟ್ಟಿ, ಚಂದ್ರಹಾಸ್, ಕುಶಲ, ಹೇಮಾವತಿ, ದಿನೇಶ್ ವಿಶ್ವನಾಥ, ಸಾಹೀರ ಬೇಗಂ ಉದ್ಯಮಿ ಮುರಳೀಧರ, ಎಸ್ಡಿಎಂಸಿ ಅಧ್ಯಕ್ಷ ರವಿ ಕೋಟ್ಯಾನ್, ಶಾಲಾ ಮುಖ್ಯ ಶಿಕ್ಷಕಿ ಸುನೀತಾ ಸುವರ್ಣ, ಹರ್ಷಾಳ ತಂದೆ ಉಮೇಶ್ ಕೋಟ್ಯಾನ್ ಉಪಸ್ಥಿತರಿದ್ದರು.
ಜಯಂತ ಪೂಜಾರಿ ಸ್ವಾಗತಿಸಿದರು. ಅನಿತಾ ಶೆಟ್ಟಿ ಸ್ವಾಗತಿಸಿದರು. ಚಿತ್ರಾವತಿ ವಂದಿಸಿದರು.
.
