ಇಂದಿನ ಯಾಂತ್ರಿಕೃತ ಯುಗದಲ್ಲಿ ನಾವು ಒಂದು ನಿರ್ಧಿಷ್ಟ ಪ್ರದೇಶದಲ್ಲಿ ಉದಾಹರಣೆಗೆ ಶಾಪಿಂಗ್ ಮಾಲ್ ಅಥವ ಕಾಲೇಜ್ ಕ್ಯಾಂಪಸ್ ತಲುಪುವಾಗ ವಾಹನ ನಿಲ್ದಾಣ ವ್ಯವಸ್ಥೆ ಬಗ್ಗೆ ತಿಳುದುಕೊಳ್ಳಬೇಕಾಗುವುದು. ಒಂದು ನಿರ್ದಿಷ್ಟ ಪ್ರದೇಶ ತಲುಪುವ ವರೆಗೆ ನಮಗೆ ಪಾರ್ಕಿಂಗ್ ವ್ಯವಸ್ಥೆ ಯಾವ ಪ್ರದೇಶದಲ್ಲಿ ಇದೆ ಎನ್ನುವುದು ದೃಢಪಡಿಸಲಾಗುವುದಿಲ್ಲ. ಒಂದು ದೊಡ್ಡ ಕಾಲೇಜ್ ಕ್ಯಾಂಪಸ್ನಲ್ಲಿ ನಾವು ಪಾರ್ಕಿಂಗ್ ಸ್ಥಳವನ್ನು ಹುಡುಕಾಡಬೇಕಾಗುತ್ತದೆ.

ಈ ಸಮಸ್ಯೆಯನ್ನು ಬಗೆಹರಿಸಲು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಭರತ್,ಅನಿತಾ,ಪ್ರತಿಕ್ಷಾ,ಸ್ಮಿತಾ ಇವರು ಸಹಾಯಕ ಪ್ರಾದ್ಯಾಪಕರಾದ ಪರಿಕ್ಷಿತ್ ನಾಯಕ್ ರವರ ಮಾರ್ಗದರ್ಶನದಲ್ಲಿ ಸ್ವಯಂ ಚಾಲಿತ ವಾಹನ ನಿಲ್ಲಿಸುವ ವ್ಯವಸ್ಥೆಯನ್ನು ಸಿದ್ಧಪಡಿಸಿದ್ದಾರೆ.
ಈ ವ್ಯವಸ್ಥೆಯ ಮೂಲಕ ನಾವು ಒಂದು ನಿದರ್ಿಷ್ಟ ಪ್ರದೇಶಕ್ಕೆ ತೆರಳುವ ಮೊದಲೆ ಅಥವಾ ಮಾರ್ಗ ಮಧ್ಯದಲ್ಲಿ ವಾಹನ ನಿಲ್ಲಿಸುವ ಸ್ಥಳಾವಾಕಾಶದ ಲಬ್ಯತೆ ಬಗ್ಗೆ ಮೊಬೈಲ್ ಆ್ಯಪ್ ಮೂಲಕ ತಿಳಿದುಕೊಳ್ಳಬಹುದು. ಎಲ್ಲಾ ಪಾರ್ಕಿಂಗ್ ಸ್ಥಳದಲ್ಲಿ ಒಂದು ಸಣ್ಣ ಐಆರ್ ಸೆನ್ಸಾರ್ ಅಳವಡಿಸಬಹುದಾಗಿದ್ದು, ಸೆನ್ಸಾರ್ ಉಪಕರಣವು ಮೈಕ್ರೋಕಂಟ್ರೋಲರ್ ಹಾಗೂ ಜಿ.ಎಸ್.ಎಮ್ ತಂತ್ರಜ್ಞಾನ ಬಳಸಿ ಮೊಬ್ಯೆಲ್ ಆ್ಯಪ್ಗೆ ಸಂದೇಶ ರವಾನಿಸುತ್ತದೆ. ಮೊಬ್ಯೆಲ್ನಲ್ಲಿ ಆ್ಯಪ್ ಬಳಸಿ ನಾವು ವಾಹನ ನಿಲ್ಲಿಸುವ ಸ್ಥಳ ಲಬ್ಯತೆಯನ್ನು ದೃಢಪಡಿಸಿಕೊಳ್ಳಬಹುದು. ಆದರೆ ಆ್ಯಪ್ ಮೂಲಕ ಸ್ಥಳಾವಕಾಶವನ್ನು ಕಾದಿರಿಸಲು ಆಗುವುದಿಲ್ಲ.
ಈ ವ್ಯವಸ್ಥೆಯ ಕಿಟ್ನ ಅಂದಾಜು ಬೆಲೆ ಸುಮಾರು 4,000 ರೂ. ಮತ್ತು ಪ್ರತಿ ಪಾರ್ಕಿಂಗ್ ಸ್ಥಳಕ್ಕೆ ಒಂದೊಂದು ಸೆನ್ಸಾರ್ ಉಪಕರಣಗಳು. ಒಂದು ಐಆರ್ ಸೆನ್ಸಾರ್ ಮಾರುಕಟ್ಟೆ ಬೆಲೆ ಸುಮಾರು ರೂ.25 ರಿಂದ 50. ಪಾರ್ಕಿಂಗ್ ಸ್ಥಳಗಳು ಜಾಸ್ತಿ ಇದ್ದಾಗ ಸೆನ್ಸಾರ್ಗಳ ಸಂಖ್ಯೆ ಹೆಚ್ಚುತ್ತದೆ, ಏಕೆಂದರೆ ಪ್ರತಿ ಪಾರ್ಕಿಂ ಗ್ ಸ್ಥಳಕ್ಕೆ ಒಂದೊಂದು ಸೆನ್ಸಾರ್ ಬಳಕೆಯಾಗುತ್ತದೆ. ಮೊಬೈಲ್ ಆ್ಯಪ್ ಮುಖಾಂತರ ಯಾವ ಪಾರ್ಕಿಂಗ್ ಸ್ಥಳ ಖಾಲಿಯಿದೆ, ಯಾವ ಸಾಲಿನಲ್ಲಿದೆ,ಯಾವ ಬ್ಲಾಕ್ನಲ್ಲಿದೆ ಎಂಬುದನ್ನು ಮೊದಲೇ ದೃಢಪಡಿಸಿಕೊಳ್ಳಬಹುದು. ಹಾಗೂ ಆ ಸಾಲಿನಲ್ಲಿ ವಾಹನವನ್ನು ಚಲಿಸಬಹುದು. ಈ ವ್ಯವಸ್ಥೆಯನ್ನು ಕಾರ್ಯ ರೂಪಕ್ಕೆ ತರಲು ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೋ. ಮಂಜುನಾಥ ಕೊಠಾರಿ ಮತ್ತು ಯೋಜನಾ ಸಂಯೋಜಕ ಹರಿಶ್ ಕುಂದರ್ ವಿದ್ಯಾರ್ಥಿಗಳಿಗೆ ಸಹಕರಿಸಿದರು.
