ಮೂಡುಬಿದಿರೆ : ರಾಜ್ಯದ ವಿವಿಧ ಸ್ಥಳಗಳಲ್ಲಿ ಕೋಮುಗಲಭೆ, ಕೊಲೆ ಸುಲಿಗೆ ಮುಂತಾದ ದೇಶ ದ್ರೋಹದ ಕೃತ್ಯ ನಡೆಸಿದ್ದ ಕೆ.ಎಫ್.ಡಿ ಮತ್ತು ಪಿಎಫ್ಐ ಸಂಘಟನೆಯ ಕಾರ್ಯಕರ್ತರ ಮೇಲೆ ಇದ್ದ ಕೇಸುಗಳನ್ನು ರಾಜ್ಯ ಸರಕಾರವು ಹಿಂಪಡೆಯುವ ಮೂಲಕ ದೇಶದ್ರೋಹಕ್ಕೆ ಪ್ರತ್ಯಕ್ಷವಾಗಿ ಪ್ರೋತ್ಸಾಹ ಕೊಡುವ ಕೆಲಸ ಮಾಡಿರುವುದು ಅತ್ಯಂತ ಖಂಡನೀಯ. ಆದ್ದರಿಂದ ರಾಜ್ಯ ಸರಕಾರ ಹಿಂಪಡೆದ ಕೇಸನ್ನು ಪುನ: ದೇಶದ್ರೋಹಿಗಳ ಮೇಲೆ ಹಾಕಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಮೂಡುಬಿದಿರೆ ಬಿಜೆಪಿ ಕ್ಷೇತ್ರ ಸಮಿತಿಯಿಂದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರಿಗೆ ಮೂಡುಬಿದಿರೆ ತಹಶೀಲ್ದಾರ್ ಮೂಲಕ ಶುಕ್ರವಾರ ಮನವಿ ಸಲ್ಲಿಸಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಬಿಜೆಪಿ ಮುಖಂಡರುಗಳಾದ ಕಸ್ತೂರಿ ಪಂಜ, ಸುದರ್ಶನ್, ದೇವ ಪ್ರಸಾದ್ ಪುನರೂರು, ಬಾಹುಬಲಿ ಪ್ರಸಾದ್ ಕೆ.ಆರ್ ಪಂಡಿತ್ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಚಿತ್ರ : 12 ಮೂಡ್ ಬಿಜೆಪಿ ಮನ

