ಸೋಮವಾರ ಪೆಟ್ರೋಲಿಯಂ ಸಚಿವಾಲಯದಲ್ಲಿ ನಡೆದ ಸಭೆಯ ನಂತರ ಪೆಟ್ರೋಲ್ ಬೆಲೆಯಲ್ಲಿ ಕಡಿಮೆ ಮಾಡಿ ಪ್ರತಿ ಲೀಟರ್ಗೆ 75 ಪೈಸೆಯಷ್ಟು ಇಳಿಕೆ ಮಾಡಲಾಗಿದೆ. ಆದರೆ ಡಿಸೇಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಡಾಲರ್ ಎದುರು ರೂಪಾಯಿ ಚೇತರಿಸಿಕೊಳ್ಳುತ್ತಿರುವುದು ಮತ್ತು ವಿದೇಶಿ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಮುಖವಾಗಿರುವುದು ಪೆಟ್ರೋಲ್ ಬೆಲೆಯಿಳಿಕೆಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಆದರೆ ಕೆಲವು ಮೂಲಗಳ ಪ್ರಕಾರ ಲೋಕಸಭೆ ಚುನಾವಣೆ ಹತ್ತಿರ ಬಂದ ಕಾರಣ ಸರ್ಕಾರದ ಪರ ಜನರ ಒಲವು ಬರಲಿ ಎಂಬ ಉದ್ದೇಶದಿಂದ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕಾರಣ ಏನೇ ಇದ್ದರೂ ವಾಹನ ಸವಾರರಿಗಂತೂ ಈ ಸುದ್ದಿ ಬೆಲ್ಲ ತಿಂದಷ್ಟು ಸಿಹಿಯಾಗಿದೆ.

