ಸಂಜು ವೆಡ್ಸ್ ಗೀತಾ ಚಿತ್ರದ ಮೂಲಕ ತನ್ನ ಪವರ್ ಏನೆಂದು ತೋರಿಸಿದ ಶ್ರೀನಗರ ಕಿಟ್ಟಿ ಸದ್ಯ ಚಿತ್ರರಂಗದ ಬ್ಯುಸಿಯೇಸ್ಟ್ ನಟರಲ್ಲಿ ಒಬ್ಬರು. ಚಿತ್ರ ಜಗತ್ತಿನಲ್ಲಿ ತನ್ನದೇ ಫ್ಯಾನ್ ಫಾಲೊವಿಂಗ್ ಸೃಷ್ಠಿಸಿರುವ ಕಿಟ್ಟಿ ಹಲವು ಯಶಸ್ವಿ ಚಿತ್ರಗಳ ಸರದಾರ. ಕಿಟ್ಟಿ ತಮ್ಮ ಮುಂದಿನ ಚಿತ್ರದಲ್ಲಿ ಎರಡೆರಡು ನಾಯಕಿರ ಜೊತೆ ಡ್ಯೂಯೆಟ್ ಆಡಲಿದ್ದಾರೆ.

kitty

ಹೌದು ಅವರ ಮುಂದಿನ ಚಿತ್ರ ತೆಲುಗು ಚಿತ್ರ ಮಿಸ್ಸಮ್ಮ ದ ಕನ್ನಡ ರೀಮೇಕ್ ಸಿನಿಮಾ ನಮಸ್ತೆ ಮೇಡಂ ಚಿತ್ರದಲ್ಲಿ ಇಬ್ಬರ ಹೆಂಡಿರ ಮುದ್ದಿನ ಮಾವ ಆಗಿದ್ದಾರೆ. ರಾಗಿಣಿ ಐಪಿಎಸ್ ಮೂಲಕ ಹವಾ ಎಬ್ಬಿಸಿರುವ ರಾಗಿಣಿ ದ್ವಿವೇದಿ ಮತ್ತು ನಿಕಿಷಾ ಪಟೇಲ್ ಕಿಟ್ಟಿಗೆ ಜೋಡಿಯಾಗಿ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಇಬ್ಬರು ಚೆಂದುಳ್ಳಿ ಚೆಲುವೆಯರ ಮಧ್ಯೆ ಸಿಲುಕುವ ಕಿಟ್ಟಿ ಮುಂದಿನ ಚಿತ್ರ ಆತನ ಅಭಿಮಾನಿಗಳಿಗಂತೂ ರಸದೌತಣ ಬಡಿಸಲಿದೆ.

By suddi9

Leave a Reply

Your email address will not be published. Required fields are marked *