ಬಂಟ್ವಾಳ: ಕಳೆದ 25 ವರ್ಷಗಳಿಂದ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ಸಾಗರ ಹೆಗ್ಗೋಡು ಕಿನ್ನರಿ ಮೇಳ ಮಕ್ಕಳ ನಾಟಕ ಸಂಸ್ಥೆಯು ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವ ಮಕ್ಕಳಿಂದ ಅರ್ಜಿ ಆಹ್ವಾನಿಸಿದೆ.
ಆ.1ರಿಂದ 20 ರತನಕ ಒಟ್ಟು 20 ದಿನಗಳಲ್ಲಿ ರಂಗ ಕಾಯರ್ಾಗಾರ ನಡೆಸುವ ಮೂಲಕ ಒಟ್ಟು 25 ಆಸಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಶಿಬಿರದಲ್ಲಿ ಆಯ್ಕೆಗೊಂಡ 15 ಮಂದಿ ಮಕ್ಕಳಿಂದ ಶಾಲಾ ಕಾಲೇಜಿನಲ್ಲಿ ನಾಟಕ ಪ್ರದರ್ಶಿಸಲು ತರಬೇತಿ ನೀಡಲಾಗುತ್ತದೆ.
ಆಸಕ್ತರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವಿದ್ಯಾರ್ಹತೆ, ರಂಭೂಮಿ ಅನುಭವ ಮತ್ತಿತರ ವಿವರಗಳೊಂದಿಗೆ ಜು.10ರೊಳಗೆ ಕಿನ್ನರ ಮೇಳ ತುಮರಿ
ಮಕ್ಕಳ ರಂಗ ಪ್ರಯೋಗ ಕೇಂದ್ರ , ಅಂಚೆ: ಹೆಗ್ಗೋಡು, ಸಾಗರ ತಾಲ್ಲೂಕು. ಶಿವಮೊಗ್ಗ -577417 ಇವರಿಗೆ ಲಿಖೀತ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
—
