ಬಂಟ್ವಾಳ: ಅಡಿಕೆ ಅಂಗಡಿಗಳಲ್ಲಿ ನಡೆಯುತ್ತಿರುವ ಕಳ್ಳತನ ಮತ್ತು ತಾಲೂಕಿನ ಅಂಗಡಿಗಳಲ್ಲಿ ಕಳ್ಳತನಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದನ್ನು ತಡೆಗಟ್ಟುವ ಸಲುವಾಗಿ ಅಂಗಡಿ ಮಾಲಿಕರ ಜೊತೆ ನಗರ ಠಾಣೆಯಲ್ಲಿ ಸಭೆ ನಡೆಯಿತು. ನಗರ ಠಾಣಾ ಉಪನಿರೀಕ್ಷಕ ನಂದಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂಗಡಿ ಮಾಲಕರು ದಾಸ್ತಾನು ಕೇಂದ್ರಕ್ಕೆ ದಿನದ 24 ಗಂಟೆ ಕಾವಲುಗಾರರನ್ನು ನೇಮಿಸಬೇಕು ಜೊತೆಗೆ ಸಿ.ಸಿಕ್ಯಾಮರಾ, ಬಾಗಿಲಿನ ಬೀಗಕ್ಕೆ ಸೈರನ್ ಅಲರಾಂ ಗಳನ್ನು ಆಳವಡಿಸುವಂತೆ ಸಭೆಯಲ್ಲಿ ತಿಳಿಸಲಾಗಿದೆ.

