ಬಂಟ್ವಾಳ; ತಾಲೂಕಿನ ಗ್ರಾಮಪಂಚಾಯತ್ ಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಆಯ್ಕೆ ಪ್ರಕ್ರಿಯೆ ಮಂಗಳವಾರ ಬಿ.ಸಿ.ರೋಡು ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆಯಿತು. ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಚೀಟಿ ಎತ್ತುವ ಮೂಲಕ ಮೀಸಲಾತಿ ನಿಗದಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಈ ಹಿಂದಿನ ಅವಧಿಗಳಲ್ಲಿ ನಿಗದಿಪಡಿಸಿದ್ದ ಮೀಸಲಾತಿ ಯನ್ನೂ ಆಧರಿಸಿ ಇಂದಿನ ಮೀಸಲಾತಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಇದೇ ವೇಳೆ ಚುನಾಯಿತ ಸದಸ್ಯರಿಂದ ಕೇಳಿಬಂದ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿಯವರೇ ಉತ್ತರಿಸಿ, ಸಂಶಯ ಬಗೆಹರಿಸಿದರು. ನಿಗದಿಯಾದ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ವಿವರ ಈ ಕೆಳಗಿನಂತಿದೆ.
ಅಳಿಕೆ- ಸಾಮಾನ್ಯ, ಸಾಮಾನ್ಯ ಮಹಿಳೆ, ಅಮ್ಮುಂಜೆ- ಹಿಂ.ವ ಎ ಮಹಿಳೆ, ಸಾಮಾನ್ಯ, ಅಮ್ಟಾಡಿ-ಸಾಮಾನ್ಯ, ಹಿಂ.ವ. ಎ ಮಹಿಳೆ, ಅನಂತಾಡಿ- ಸಾಮಾನ್ಯ, ಹಿಂ.ವ. ಎ ಮಹಿಳೆ, ಅರಳ-ಹಿಂ.ವ.ಎ ಮಹಿಳೆ, ಹಿಂ.ವ. ಬಿ, ಬಡಗಬೆಳ್ಳೂರು-ಸಾಮಾನ್ಯ ಮಹಿಳೆ, ಹಿಂ.ವ. ಎ, ಬಡಗಕಜೆಕಾರು- ಹಿಂ.ವ. ಎ, ಸಾಮಾನ್ಯ ಮಹಿಳೆ, ಬಾಳೆಪುಣಿ- ಪರಿಶಿಷ್ಟ ಜಾತಿ, ಹಿಂ.ವ.ಬಿ, ಬಾಳ್ತಿಲ- ಪರಿಶಿಷ್ಟ ಪಂಗಡ, ಸಾಮಾನ್ಯ ಮಹಿಳೆ, ಬರಿಮಾರು ಹಿಂ.ವ.ಎ, ಸಾಮಾನ್ಯ ಮಹಿಳೆ, ಬೋಳಂತೂರು-ಹಿಂ.ವ.ಎ ಮಹಿಳೆ, ಸಾಮಾನ್ಯ, ಚೈನ್ನೈತ್ತೋಡಿ-ಸಾಮಾನ್ಯ, ಹಿಂ.ವ.ಎ ಮಹಿಳೆ, ಗೋಳ್ತಮಜಲು-ಸಾಮಾನ್ಯ ಮಹಿಳೆ, ಹಿಂ.ವ.ಎ, ಇಡ್ಕಿದು-ಸಾಮಾನ್ಯ ಮಹಿಳೆ, ಸಾಮಾನ್ಯ, ಇರಾ – ಸಾಮಾನ್ಯ, ಹಿಂ.ವ. ಎ ಮಹಿಳೆ, ಇರ್ವತ್ತೂರು – ಹಿಂ.ವ. ಎ ಮಹಿಳೆ, ಸಾಮಾನ್ಯ, ಕಡೇಶ್ವಾಲ್ಯ-ಸಾಮಾನ್ಯ ಮಹಿಳೆ, ಸಾಮಾನ್ಯ, ಕಳ್ಳಿಗೆ- ಪರಿಶಿಷ್ಟ ಪಂಗಡ ಮಹಿಳೆ, ಹಿಂ.ವ. ಎ, ಕನ್ಯಾನ- ಪರಿಶಿಷ್ಟ ಜಾತಿ ಮಹಿಳೆ, ಸಾಮಾನ್ಯ, ಕರಿಯಂಗಳ- ಸಾಮಾನ್ಯ ಮಹಿಳೆ, ಸಾಮಾನ್ಯ, ಕರೋಪಾಡಿ- ಹಿಂ.ವ. ಬಿ ಮಹಿಳೆ, ಸಾಮಾನ್ಯ, ಕಾವಳಮೂಡೂರು- ಹಿಂ.ವ.ಬಿ, ಹಿಂ.ವ.ಎ ಮಹಿಳೆ, ಕಾವಳಪಡೂರು-ಸಾಮಾನ್ಯ, ಹಿಂ.ವ.ಎ ಮಹಿಳೆ, ಕೆದಿಲ-ಹಿಂ.ವ ಎ,ಪರಿಶಿಷ್ಟ ಜಾತಿ ಮಹಿಳೆ, ಕೇಪು-ಹಿಂ.ವ.ಬಿ,ಸಾಮಾನ್ಯ ಮಹಿಳೆ, ಕೊಳ್ನಾಡು-ಸಾಮಾನ್ಯ, ಸಾಮಾನ್ಯ ಮಹಿಳೆ, ಕುಕ್ಕಿಪ್ಪಾಡಿ- ಹಿಂ.ವ.ಎ, ಸಾಮಾನ್ಯ ಮಹಿಳೆ, ಕುರ್ನಾಡು-ಸಾಮಾನ್ಯ ಮಹಿಳೆ, ಸಾಮಾನ್ಯ, ಮಂಚಿ-ಸಾಮಾನ್ಯ ಮಹಿಳೆ, ಸಾಮಾನ್ಯ, ಮಾಣಿ-ಸಾಮಾನ್ಯ ಮಹಿಳೆ, ಹಿಂ.ವ.ಎ, ಮಾಣಿಲ- ಹಿಂ.ವ.ಎ, ಪರಿಶಿಷ್ಟ ಪಂಗಡ ಮಹಿಳೆ, ಮಣಿನಾಲ್ಕೂರು-ಹಿಂ.ವಎ ಮಹಿಳೆ, ಪರಿಶಿಷ್ಟ ಪಂಗಡ, ಮೇರಮಜಲು- ಸಾಮಾನ್ಯ, ಸಾಮಾನ್ಯ ಮಹಿಳೆ, ನರಿಕೊಂಬು-ಸಾಮಾನ್ಯ, ಸಾಮಾನ್ಯ ಮಹಿಳೆ, ನರಿಂಗಾನ-ಸಾಮಾನ್ಯ,ಸಾಮಾನ್ಯ ಮಹಿಳೆ, ನಾವೂರು-ಪರಿಶಿಷ್ಟ ಪಂಗಡ ಮಹಿಳೆ, ಹಿಂ.ವ.ಎ, ನೆಟ್ಲಮುಡ್ನೂರು- ಪರಿಶಿಷ್ಟ ಜಾತಿ ಮಹಿಳೆ, ಹಿಂ.ವ.ಎ, ಪಂಜಿಕಲ್ಲು- ಸಾಮಾನ್ಯ ಮಹಿಳೆ,ಸಾಮಾನ್ಯ, ಪೆರಾಜೆ- ಹಿಂ.ವ.ಎ, ಪರಿಶಿಷ್ಟ ಜಾತಿ ಮಹಿಳೆ, ಪೆರ್ನೆ-ಸಾಮಾನ್ಯ ಮಹಿಳೆ, ಸಾಮಾನ್ಯ ಮಹಿಳೆ, ಪೆರುವಾಯಿ-ಸಾಮಾನ್ಯ, ಪರಿಶಿಷ್ಟ ಪಂಗಡ ಮಹಿಳೆ, ಫಜೀರು- ಸಾಮಾನ್ಯ , ಹಿಂ.ವ.ಎ ಮಹಿಳೆ, ಪಿಲಾತಬೆಟ್ಟು- ಸಾಮಾನ್ಯ, ಹಿಂ.ವ.ಎ.ಮಹಿಳೆ, ಪುದು- ಸಾಮಾನ್ಯ, ಸಾಮಾನ್ಯ ಮಹಿಳೆ, ಪುಣಚ- ಸಾಮಾನ್ಯ ಮಹಿಳೆ, ಸಾಮಾನ್ಯ, ರಾಯಿ-ಸಾಮಾನ್ಯ, ಸಾಮಾನ್ಯ ಮಹಿಳೆ, ಸಜಿಪಪಡು-ಹಿಂ.ವ.ಎ ಮಹಿಳೆ, ಸಾಮಾನ್ಯ, ಸಜಿಪಮೂಡ-ಸಾಮಾನ್ಯ, ಹಿಂ.ವ.ಬಿ. ಮಹಿಳೆ, ಸಜಿಪಮುನ್ನೂರು-ಸಾಮಾನ್ಯ, ಸಾಮಾನ್ಯ ಮಹಿಳೆ, ಸಜಿಪನಡು-ಹಿಂ.ವ.ಎ, ಸಾಮಾನ್ಯ ಮಹಿಳೆ, ಸಾಲೆತ್ತೂರು-ಸಾಮಾನ್ಯ ಮಹಿಳೆ, ಪರಿಶಿಷ್ಟ ಜಾತಿ, ಸಂಗಬೆಟ್ಟು- ಹಿಂ.ವ.ಬಿ ಮಹಿಳೆ, ಸಾಮಾನ್ಯ, ಸರಪಾಡಿ- ಸಾಮಾನ್ಯ ಮಹಿಳೆ, ಸಾಮಾನ್ಯ, ತುಂಬೆ-ಸಾಮಾನ್ಯ ಮಹಿಳೆ, ಸಾಮಾನ್ಯ, ಉಳಿ-ಸಾಮಾನ್ಯಮಹಿಳೆ, ಹಿಂ.ವ.ಎ, ವೀರಕಂಭ- ಹಿಂ.ವ. ಎ ಮಹಿಳೆ, ಸಾಮಾನ್ಯ, ವಿಟ್ಲ ಮುಡ್ನೂರು-ಹಿಂ.ವ.ಎ ಮಹಿಳೆ, ಸಾಮಾನ್ಯ, ವಿಟ್ಲ ಪಡ್ನೂರು-ಸಾಮಾನ್ಯ, ಹಿಂ.ವ.ಬಿ.ಮಹಿಳೆ. ನಿಗದಿಯಾಗಿದೆ.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.



