ಬಂಟ್ವಾಳ : ಮುದೆಲ್ ಮುಟ್ಟಿ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಸಜಿಪ ಮುನ್ನೂರು ಇದರ ಜೀರ್ಣೋದ್ಧಾರ ಅಂಗವಾಗಿ ನೂತನ ಬಾಲಾಲಯದಲ್ಲಿ ಶ್ರೀ ದೈವದ ಪ್ರತಿಷ್ಠಾಪನಾ ಪ್ರಯುಕ್ತ ಬ್ರಹ್ಮಶ್ರೀ ನೀಲೇಶ್ವರ ಕೆ.ಯು.ಪದ್ಮನಾಭ ತಂತ್ರಿಗಳು ಆಗಮಿಸಿದಾಗ ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಎ.ಸಿ.ಭಂಡಾರಿ , ಪದಾಧಿಕಾರಿಗಳಾದ ನ್ಯಾಯವಾದಿ ದಿನೇಶ್ ಭಂಡಾರಿ , ಎಂ.ಸುಬ್ರಹ್ಮಣ್ಯ ಭಟ್ , ಕೋಟಿ ಮಾರ್ತರು ಯಾನೆ ಮಂಜುನಾಥ ರೈ, ಚಿತ್ರಾಕ್ಷ ಶೆಟ್ಟಿ , ಎಂ.ಸೂರ್ಯನಾರಾಯಣ ಭಟ್, ಎನ್.ಕೆ.ಶಿವ , ದೇವಪ್ಪ ಮಡಿವಾಳ , ಮಾರಪ್ಪ ಕೊಟ್ಟಾರಿ , ಸಚ್ಚಿದಾನಂದ ಖಂಡೇರಿ, ಜಯಶಂಕರ ಬ್ರಾಸಿತ್ತಾಯ , ಪರಮೇಶ್ವರ ಎಂ. , ಪರಮೇಶ್ವರ ಐತಾಳ್ , ಹರಿಪ್ರಸಾದ್ ಭಂಡಾರಿ, ಧನಂಜಯ ಶೆಟ್ಟಿ , ಶಿವರಾಮ ಬ್ರಾಸಿತ್ತಾಯ, ಪ್ರಸಾದ್ ಶೆಟ್ಟಿ , ಗಂಗು ಗಟ್ಟಿ, ಸತೀಶ್ ಶೆಟ್ಟಿ, ಶಶಿರಾಜ್ ರಾವ್, ಲಕ್ಷ್ಮಣ ಸಪಲ್ಯ, ಚಂದ್ರನಾಥ ,ರಾಮ ಮತ್ತಿತರರು ಉಪಸ್ಥಿತರಿದ್ದರು.

