ಸುದ್ದಿ9 ಕೈಕಂಬ: ಅಡ್ಡೂರು,ಪೊಳಲಿ, ಪುಂಚಮೆ,ಬಡಕಬೈಲ್, ಅಮ್ಮುಂಜೆ ಆಸುಪಾಸಿನ ಗ್ರಾಮೀಣ ಭಾಗದ ಜನರಿಗೆ ಸಂತಸದ ವಿಷಯ “ರಿಫಾ ಪಾಲಿ ಕ್ಲಿನಿಕ್ ಅಡ್ಡೂರು” ಇದರ ಸಹಯೋಗದೊಂದಿಗೆ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ದೇರಳಕಟ್ಟೆ ಮಂಗಳೂರು ಇವರು ಕಣಚೂರು ಆಸ್ಪತ್ರೆಯ ತಜ್ಙ ವೈದ್ಯರುಗಳಿಂದ ವಾರದ ಪ್ರತೀ ಬುಧವಾರ 9.30ರಿಂದ ಮಧ್ಯಹ್ನ 1 ಗಂಟೆಯವರೆಗೆ ಕೆಂದ್ರಕ್ಕೆ ಭೇಟಿ ನೀಡಿ ಉಚಿತ ತಪಾಸಣೆ ಹಾಗೂ ಉಚಿತ ವ್ಯದ್ಯಕೀಯ ಸಲಹೆಯನ್ನು ನೀಡುವರು.
Arogya kendra
ಈ ಭಾಗದ ಆಸುಪಾಸಿನ ಜನರು ಇದರ ಪ್ರಯೋಜನ ಪಡೆಯ ಬಹುದು. ಜೂ.10ರಂದು ಬುಧವಾರ  ಬೆಳಗ್ಗೆ 10 ಗಂಟೆಗೆ ರಿಫಾ ಪಾಲಿ ಕ್ಲಿನಿಕ್ ಅಡ್ಡೂರಿನಲ್ಲಿ ಅರಣ್ಯ ಮತ್ತು ಪರಿಸರ ಸಚಿವ ರಮಾನಾಥ ರೈ ಅವರು ಆರೋಗ್ಯ ಕೇಂದ್ರವನ್ನು  ಉದ್ಘಾಟಿಸಲಿದ್ದಾರೆ. ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *