ಕೃಷಿಯು ನೆಮ್ಮದಿಯ ಜೀವನದ ದಾರಿಯಾಗಿದೆ ಕೃಷಿಯಲ್ಲಿ ದೊರೆಯುವ ಸಂತೋಷ ಬೇರೆ ಕೆಲಸದಲ್ಲಿ ಸಿಗದು ಕೃಷಿಯನ್ನು ನಿರ್ಲಕ್ಷಿಸಿದರೆ ನಾವು ಮುಂದೊಂದು ದಿನ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಮೂಡುಶೆಡ್ಡೆ ಪ್ರಗತಿಪರ ಕೃಷಿಕರಾದ ಶ್ರೀ ಪ್ರವೀಣ್ ಆಳ್ವ ಹೇಳಿದರು. ಅವರು ಜೂ. 5ರಂದು ಶುಕ್ರವಾರ ಕೈಕಂಬ ವಿಶ್ವರೂಪಸೌಧದ ದಿಶಾ ಟ್ರಸ್ಟ್ ಕಚೇರಿಯಲ್ಲಿ ನಡೆದ ದಿವಂಗತ ತ್ಯಾಂಪಣ್ಣ ಶೆಟ್ಟಿ ಸ್ಮರಣಾರ್ಥ ಬೀಜಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಮುಖ್ಯ ಅತಿಥಿಯಾಗಿ ಮಲ್ಲೂರು ಪರಾರಿ ಬರ್ಕೆ ಆಶಿತ್ ಶೆಟ್ಟಿ ಮಾತನಾಡಿ ಪರಂಪರಾಗತವಾಗಿ ಬೆಳೆದು ಬಂದ ಬೀಜ ತಳಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗ ಪರಿಚಯಿಸುವ ಜೊತೆಗೆ ಕೃಷಿಕರಲ್ಲಿ ಸಂಘಟಿತ ಸಮುದಾಯಿಕ ಕೃಷಿಯ ಚಿಂತನೆ ಮೂಡಬೇಕಾಗಿರುವುದು ಪ್ರಸ್ತುತ ಸ್ಥಿತಿಯಲ್ಲಿ ಅಗತ್ಯವಾಗಿದೆ ಎಂದರು.


ನೇಸರ ಕೇಂದ್ರ ಸಮಿತಿ ಮತ್ತು ಸ್ಪಂದನ ಸ್ವ ಸಹಾಯ ಸಂಘಗಳ ಒಕ್ಕೂಟ ಗುರುಪುರ ಕೈಕಂಬ ಮತ್ತು ದಿಶಾ ಟ್ರಸ್ಟ್ (ರಿ) ಕೈಕಂಬ ಇವರ ಜಂಟಿ ಆಶ್ರಯದಲ್ಲಿ ನಡೆದ ಬೀಜಮೇಳದ ಸಭಾಧ್ಯಕ್ಷತೆಯನ್ನು ನೇಸರ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ನೋಬರ್ಟ್ ಸಿಕ್ವೇರಾ ವಹಿಸಿ ಮಾತನಾಡಿದ ಅವರು ಭೂಮಿ ಯಾವತ್ತು ತನ್ನ ಋಣವನ್ನು ಇಟ್ಟು ಕೊಳ್ಳುವುದಿಲ್ಲ ಜಾತಿ ಮತ ಬೇದವಿಲ್ಲದೇ ರೈತರಾದ ನಾವೆಲ್ಲರೂ ಸಂಘಟಿತ ರಾಗಿ ಮುನ್ನಡೆಯುವುದು ಅಗತ್ಯ ಎಂದರು. ವೇದಿಕೆಯಲ್ಲಿ ದಿಶಾ ಟ್ರಸ್ಟ್ ನ ನಿರ್ದೇಶಕರಾದ ಸಿಲ್ವೆಸ್ಟರ್ ಡಿ ಸೋಜ ಸ್ಪಂದನ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಕುಮಾರಿ ಅನುಸೂಯ ಕಾಜವ ಕುಪ್ಪೆಪದವು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದಿವಂಗತ ತ್ಯಾಂಪಣ್ಣ ಶೆಟ್ಟಿ ಸ್ಮರಣಾರ್ಥ ವಾಗಿ ಕೃಷಿಯಲ್ಲಿ ಸಾಧನೆಗೈದ ಕೃಷಿಕರಾದ ಕಮಲ ಅಂದ್ರೇಲು ಕಿಲಿಂಜಾರು, ಕಸ್ತೂರಿ ತೇರೆಜಾಲು ಕೊಳವೂರು , ಜೀವಿತ ರೊಡ್ರಿಗಸ್ ಕಿನ್ನಿಕಂಬಳ ಕೊಳಂಬೆ ,ಜೆಸಿಂತ ಸಿಕ್ವೇರಾ ರಾಯರಕೋಡಿ ಕಂದಾವರ , ರಾಜರಾಮ್ ಕೋಟ್ಯಾನ್ ಮಲ್ಲೂರು, ಜಾನ್ ಮಸ್ಕರೇನಸ್ ಉಳಾಯಿಬೆಟ್ಟು, ಲವನ್ ಡಿ ಸೋಜ ಮಡಿ ಅಡ್ಡೂರು, ಲೋಕನಾಥ ಪೊನ್ನೆಲ ಅಡ್ಡೂರು, ಜಾನ್ಸಿ ಮಿನೇಜಸ್ ಕೆರಮ ಮೂಡುಶೆಡ್ಡೆ , ಸಿಪ್ರಿಯನ್ ಮಿನೇಜಸ್ ಕೆರಮ ಮೂಡುಶೆಡ್ಡೆ ಇವರುಗಳನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ನೇಸರ ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿ ಶಿವರಾಮ ಶೆಟ್ಟಿ ಮಲ್ಲೂರು, ಸ್ಪಂದನ ಒಕ್ಕೂಟದ ಕಾರ್ಯದರ್ಶಿ ಸವಿತ ಕೊಳವೂರು , ಕೋಶಾಧಿಕಾರಿ ಎಲ್ಸಿ ಡಿ ಸೋಜ ದಿಶಾ ಟ್ರಸ್ಟ್ ನ ಸಂಯೋಜಕರಾದ ಹೆನ್ರಿ ವಾಲ್ಡರ್ , ಕ್ಷೇತ್ರ ಸಂಯೋಜಕ ರುದೇಶ, ಕ್ಷೇತ್ರ ಕಾರ್ಯಕರ್ತರಾದ ವಿನೋದ, ಹರಿಣಾಕ್ಷಿ, ರಂಜಿನಿ ಉಪಸ್ಥಿತರಿದ್ದರು. ದಿಶಾ ಟ್ರಸ್ಟ್ ನ ಕ್ಷೇತ್ರ ಕಾರ್ಯಕರ್ತೆ ಸುಮಂಗಲ ಕಾರ್ಯಕ್ರಮ ನಿರೂಪಿಸಿ ನೇಸರ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ರಮೇಶ್ ಹೆಗ್ಡೆ ಬೆಳ್ಳಿಬೆಟ್ಟು ಸ್ವಾಗತಿಸಿ ಕಾರ್ಯದರ್ಶಿ ಜ್ಯೋತಿ ಲೂಯಿಸ್ ವಾದಗುಂಡಿ ವಂದಿಸಿದರು.


