ಸುದ್ದಿ9 ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್ ಹಾಗೂ ಹೊಸತಾಗಿ ಸೇರ್ಪಡೆಗೊಂಡ ಅಮ್ಮುಂಜೆ ಗ್ರಾಮ ಪಂಚಾಯತ್ ಗೆ ಬಿಜೆಪಿ ಬೆಂಬಲಿತ ಅಭ್ಯಥಿಗಳು ವಿಜೇತರಾಗಿದ್ದಾರೆ . ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಾನಕ್ಕೆ ತೆರಲಿ ಪ್ರಸಾದ ಸ್ವೀಕರಿಸಿ ವಿಜಯೋತ್ಷವ ಆಚರಿಸಿದರು. ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು .
ಪೊಳಲಿ, ಕಲ್ಕುಟ,ಕರಿಯಂಗಳ, ಪಲ್ಲಿಪಾಡಿ, ಬಡಕಬೈಲ್, ಅಮ್ಮುಂಜೆ, ಮುಡಾಯಿಕೋಡಿ, ಬೆಂಜನಪದವು, ಕಲಾಯಿ, ಇಲ್ಲಿಯ ಮತದಾರರು ಬೈಕ್ ,ರಿಕ್ಷಾ, ಕಾರ್, ತೆರೆದ ವಾಹನದಲ್ಲಿ ವಿಜಯೋತ್ಸವ ಆಚರಿಸಿದರು . ಬಡಕಬೈಲ್ ಪರಿಸರದಲ್ಲಿ ಪಟಾಕಿಸಿಡಿಸಿದ ಕಸಗಳನ್ನು ಸ್ವಚ್ಚ ಮಾಡುವ ಮೂಲಕ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಸ್ವಚ್ಚತಾಕಾರ್ಯಕ್ರಮಕ್ಕೆ ಈಸಂದರ್ಭದಲ್ಲಿ ಕಾರ್ಯಕರ್ತರು ಮಾರ್ಗವನ್ನು ಗುಡಿಸಿ ಸ್ವಚ್ಚಗೊಳಿಸಿದರು.










