ಮೂಡುಬಿದರೆ: ಹೊಸಬೆಟ್ಟು ಗ್ರಾಮದ ದಮುರ್ಗೆ ದರ್ಖಾಸು ನಿವಾಸಿ ಪ್ರವೀಣ್ (19) ತನ್ನ ಮನೆ ಸಮೀಪದ ಮೀಸಲು ಅರಣ್ಯದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.
ಯಾವುದೇ ಕೆಲಸವಿಲ್ಲದಿರುವುದರಿಂದ ತಾನು ಮನನೊಂದಿದ್ದು ಆತ್ಮಹತ್ಯೆಗೈದಿದ್ದೇನೆ ನನ್ನ ಸಾವಿಗೆ ನಾನೇ ಕಾರಣವೆಂದು ಮನೆಯಲ್ಲಿ ಚೀಟಿ ಬರೆದಿಟ್ಟು ಮಂಗಳವಾರ ಬೆಳಿಗ್ಗೆ ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ಪರಿಸರದಲ್ಲಿ ಹುಡುಕಾಡಿದಾಗ ಮರಕ್ಕೆ ನೇಣು ಬಿಗಿದು ಆತ್ಯಹತ್ಯೆಗೈದಿರುವುದು ಕಂಡು ಬಂದಿದೆ. ಮೂಡುಬಿದರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

By Suddi9

Leave a Reply

Your email address will not be published. Required fields are marked *