• ಮೂಡುಬಿದರೆ: ಬ್ಯಾಂಕುಗಳು ಬಡವರ, ದೀನ ದಲಿತರ ಏಳಿಗೆಗಾಗಿ ಶ್ರಮಿಸಬೇಕು. ಬ್ಯಾಂಕ್ಗಳು ಅಶಕ್ತರಿಗೆ ಶಕ್ತಿ ತುಂಬವಂತಾಗಬೇಕು. ಉತ್ತಮ ಆಡಳಿತ ವರ್ಗ ಮತ್ತು ಒಮ್ಮತದ ಸೇವಾ ಮನೋಭಾವದಿಂದ ಬ್ಯಾಂಕುಗಳು ಅಭಿವೃದ್ಧಿ ಹೊಂದುತ್ತವೆ ಎಂದು ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಅಲೋಶಿಯಸ್ ಪೌಲ್ ಡಿ’ಸೋಜ ಹೇಳಿದರು.
  • mbd_may27_3 (2)
    ಶತಮಾನೋತ್ಸವ ಸಂಭ್ರಮದಲ್ಲಿರುವ ಮೂಡುಬಿದರೆ ಎಂಸಿಎಸ್ ಬ್ಯಾಂಕ್ ಬುಧವಾರ ಭೇಟಿ ನೀಡಿ ಆಶೀರ್ವಚನವಿತ್ತರು. ಸಹಕಾರಿ ಬ್ಯಾಂಕುಗಳು ಶ್ರದ್ಧೆ ಮತ್ತು ಸೇವಾ ಮನೋಭಾವದಿಂದ ಬಡವರಿಗೆ ಸರಳ ರೀತಿಯಲ್ಲಿ ಸಾಲ ನೀಡುವ ಮೂಲಕ ಅವರ ಸಾಧನೆಗೆ ಕಾರಣರಾಗಬೇಕು. ನಮ್ಮ ದೇಶದಲ್ಲಿ ಜನರಿಗೆ ದೇವರ ಬಗ್ಗೆ ಭಕ್ತಿ, ವಿಶ್ವಾಸ ಮತ್ತು ನಂಬಿಕೆ ಇರುವುದರಿಂದಲೇ ದೇವರ ಆಶೀವರ್ಾದ ಸದಾ ನಮ್ಮ ಮೇಲಿದೆ ಎಂದು ಹೇಳಿದ ಅವರು ಮಹಿಳೆಯರ ಅಭಿವೃದ್ಧಿಗಾಗಿ ಈಗಾಗಲೇ ಕೋ ಅಪರೇಟಿವ್ ಸೊಸೈಟಿಯನ್ನು ತೆರೆದಿದ್ದೇವೆ. ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳ ಮೂಲಕ ಒಳ್ಳೆಯ ಸೇವೆ ಲಭಿಸುತ್ತದೆ ಇದು ಇತರರಿಗಾಗಿ ಇದು ಮಾದರಿಯಾಗಲಿ ಎಂದು ಹೇಳಿದರು.
    ಇದೇ ಸಂದರ್ಭದಲ್ಲಿ ಬ್ಯಾಂಕ್ ವತಿಯಿಂದ ಬಿಷಪ್ ಅವರನ್ನು ಸನ್ಮಾನಿಸಲಾಯಿತು.
    ಮಂಗಳೂರು ಬಿಷಪ್ ನಿವಾಸದ ಧರ್ಮಗುರು ಫಾ.ಡೆನ್ನಿಸ್, ಮೂಡುಬಿದರೆ ಟೌನ್ ಚರ್ಚ್ನ ಧರ್ಮಗುರು ಆಸ್ಟಿನ್ ಪೀಟರ್ ಪೇರಿಸ್, ಆಲಂಗಾರು ಚರ್ಚ್ನ ಧರ್ಮಗುರು ಬೇಸಿಲ್ ವಾಸ್, ಆಲಂಗಾರು ನಿತ್ಯಾಧರ್ ನಿವಾಸದ ಮುಖ್ಯ ಧರ್ಮಗುರು ಎವುಜಿನ್ ಡಿ’ಸಿಲ್ವ, ಬ್ಯಾಂಕ್ನ ಉಪಾಧ್ಯಕ್ಷ ಜಾರ್ಜ್  ಮೋನಿಸ್, ನಿರ್ದೇಶಕರುಗಳಾದ ಪಾಂಡುರಂಗ ಮಲ್ಯ, ಸಿ.ಹೆಚ್ ಗಫೂರ್, ಪ್ರೇಮಾ ಸಾಲ್ಯಾನ್, ಅನಿತಾ ಶೆಟ್ಟಿ. ಪ್ರೇಮಾನಂದ ಪ್ರಭು ಉಪಸ್ಥಿತರಿದ್ದರು.
    ಬ್ಯಾಂಕಿನ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಎಂ.ಚಂದ್ರಶೇಖರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *