ಮುಂಬಯಿ: ಮಂಗಳೂರು ಬಜ್ಪೆಯ ಶ್ರೀ ಕ್ಷೇತ್ರ ಸುಂಕದಕಟ್ಟೆ ಹಾಗೂ ಬೃಹನ್ಮುಂಬಯಿ ಮಹಾಲಕ್ಷ್ಮೀ ಸಾತ್ರಸ್ತಾ ಜಾಕೋಬ್ ಸರ್ಕಲ್ನ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಅಮ್ಮನವರ ಆರಾಧಕ ಮತ್ತು ಬಜ್ಪೆ-ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಶೈಕ್ಷಣಿಕ ಸಂಸ್ಥೆಗಳ ಸಂಸ್ಥಾಪಕ ಶ್ರೀ ನಿರಂಜನ ಸ್ವಾಮೀಜಿ ಅವರ ದೈವಕ್ಯತೆಗೆ ಶ್ರೀ ಉಮಾಮಹೇಶ್ವರಿ ದೇವಸ್ಥಾನ ಜೆರಿಮೆರಿ ಇದರ ಆಡಳಿತ ಮೊಕ್ತೇಸರ ಬಿ.ಕೆ ಶೀನ, ಪ್ರಧಾನ ಅರ್ಚಕ ಎಸ್.ಎನ್ ಉಡುಪ, ಪುರೋಹಿತ ಕೆ.ಸದಾಶಿವ ಶಾಂತಿ, ಉಳ್ಳೂರು ಧನಂಜಯ ಶಾಂತಿ, ಹರೀಶ್ ಜಿ.ಅಮೀನ್, ಸುರೇಂದ್ರ ಎ.ಪೂಜಾರಿ, ತೋನ್ಸೆ ಸಂಜೀವ ಪೂಜಾರಿ, ಸಂದರ್ಶ್ ಚೌಟ ಮುಲುಂಡ್ ಹಾಗೂ ಅಪಾರ ಭಕ್ತ ವೃಂದವು ಸಂತಾಪ ಸೂಚಿಸಿದ್ದಾರೆ.

