ಉಳ್ಳಾಲ : ಮಹಾಯಾಗದ ಯಶಸ್ವಿಯಲ್ಲಿ ಎಲ್ಲರ ಸಹಕಾರ ಮಹತ್ವದ್ದಾಗಿದ್ದು, ಮಹಾಯಾಗದ ಸಿದ್ಧತೆಯಿಂದ ಪೂರ್ಣಾಹುತಿಯಾಗುವವರೆಗೆ ಕಾರ್ಯಕರ್ತರ ಶ್ರಮ ಕೋಟಿ ಹಣಕ್ಕಿಂತಲೂ ಮಿಗಿಲಾದುದು ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ, ಜಗದ್ಗುರು ಶ್ರೀನಿತ್ಯಾನಂದ ಮಹಾಪೀಠಮ್ ಇಲ್ಲಿನ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಕೋಟೆಕಾರು ಬೀರಿಯ ಶ್ರೀ ಸಿದ್ಧಿವಿನಾಯಕ ಮಂದಿರದಲ್ಲಿ ಇತ್ತೀಚೆಗೆ ಕೊಂಡೆವೂರಿನಲ್ಲಿ ನಡೆದ ಚತುರ್ವೇದ ಸಂಹಿತಾ ಯಾಗ ಮತ್ತು ಬೃಹತ್ ಗಾಯತ್ರಿ ಘೃತ ಸಂಪ್ರಾಪ್ತಿ ಮಹಾಯಾಗದ ಘೃತಾ ವಿತರಣಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮಹಾಯಾಗ ಯಶಸ್ವಿಯಾಗಿದೆ ಎನ್ನುವುದು ಈ ಯಾಗದಲ್ಲಿ ಭಾಗವಹಿಸಿದ ಊರ ಮತ್ತು ಪರವೂರ ಭಕ್ತರ ಅನಿಸಿಕೆ.
ಮಹಾಯಾಗದ ಸಮಾಪ್ತಿಯ ಬಳಿಕ ಪ್ರವಾಸ ಮಾಡಿದ ಪ್ರದೇಶಗಳಲ್ಲಿ ಯಾಗದ ಯಶಸ್ವಿಯ ಉತ್ತಮ ಮಾತುಗಳು ವ್ಯಕ್ತವಾಗಿದೆ. ಯಾಗ ಯಶಸ್ವಿಯಲ್ಲಿ ಎಲ್ಲರ ಶ್ರಮ ಇದೆ. ಪ್ರತಿಯೊಂದು ವಲಯ ಸಮಿತಿಗಳ ಸಹಕಾರದಿಂದ, ಕಾರ್ಯಕರ್ತರ ಶ್ರಮದಿಂದ ಯಾಗ ಐಶಸ್ವಿಯಾಗಿದ್ದು, ಯಾಗದಿಂದ ಪರಿಸರದ ಮೇಲೆ ಉತ್ತಮ ಪರಿಣಾಮ ಬೀರಿದೆ ಎನ್ನುವುದು ಯಾಗದಲ್ಲಿ ಭಾಗವಹಿಸಿದ ವಿಜ್ನಾನಿಗಳ ಅನಿಸಿಕೆ ಇದರ ಸ್ಪಷ್ಟ ವೈಜ್ಞಾನಿ ನಿಕ ಮಾಹಿತಿ ನಮಗೆ ದೊರೆಯಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಯಾಗದ ಉಳ್ಳಾಲ ಸಮಿತಿಯ ಅಧ್ಯಕ್ಷ ರವೀಂದ್ರ ರೈ ಹರೇಕಳ ವಹಿಸಿದ್ದರು.
ಮಹಾಯಾಗದ ಗೌರವ ಸಲಹೆಗಾರ ಹಾಗೂ ಶ್ರೀ ಚೀರುಂಭ ಭಗವತೀ ತೀಯಾ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹಾಗೂ ಮಹಾಯಾಗದ ಗೌರವ ಸಲಹೆಗಾರ ಸತೀಶ್ ಕುಂಪಲ, ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಹಾಗೂ ಮಹಾ ಯಾಗದ ಗೌರವ ಸಲಹೆಗಾರ ಚಂದ್ರಶೇಖರ್ ಉಚ್ಚಿಲ್, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ದೇರಳಕಟ್ಟೆ ಇದರ ಆಡಳಿತ ಮೊಕ್ತೇಸರ ಹಾಗೂ ಮಹಾಯಾಗದ ಕಾರ್ಯಾಧ್ಯಕ್ಷ ಚಂದ್ರಹಾಸ್ ಅಡ್ಯಂತಾಯ, ಮಹಾಯಾಗ ಹೊರೆಕಾಣಿಕೆ ಸಮಿತಿ ಅಧ್ಯಕ್ಷ ನೆತ್ತಿಬಾಳಿಕೆ ಸೀತಾರಾಮ ಶೆಟ್ಟಿ ದಡಸ್, ಕೊಂಡವೂರು ಮಠದ ಆರೋಗ್ಯ ವಿಭಾಗದ ಪ್ರಧಾನ ಸಂಚಾಲಕ ಶೇಖರ್ ಕೊಂಡೆವೂರು ,ಮಹಾಯಾಗ ಸಮಿತಿ ಕಾರ್ಯದರ್ಶಿ ಕೃಷ್ಣ ಶಿವಕೃಪಾ ಕುಂಜತ್ತೂರು, ಮಹಾಯಾಗ ಸಮಿತಿ ಪ್ರಧಾನ ಸಂಚಾಲಕ ಸುರೇಶ್ ಕೆ.ಪಿ. ಮಾಡೂರು ಉಪಸ್ಥಿತರಿದ್ದರು.
ಮಹಾಯಾಗ ಪ್ರಚಾರ ಸಮಿತಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ ಸ್ವಾಗತಿಸಿದರು. ಹರಿಯಪ್ಪ ಸಾಲಿಯಾನ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾಧರ್ ಶೆಟ್ಟಿ ವಂದಿಸಿದರು.
