ಉಳ್ಳಾಲ : ಕೊಲ್ಯ ಕನೀರು ತೋಟ ಬಳಿ ಸಿಡಿಲು ಬಡಿದು ಮೋನಪ್ಪ ಪೂಜಾರಿ ಎಂಬವರ ಮನೆಗೆ ಹಾನಿಯಾಗಿದ್ದು, ಮನೆಯ ಹೆಂಚು ಸೇರಿದಂತೆ ಮನೆಯೊಳಗಿದ್ದ ವಸ್ತುಗಳಿಗೆ ಹಾನಿಯಾಗಿದೆ.


ಘಟನೆ ನಡೆದ ಸಂದರ್ಭದಲ್ಲಿ ಮೋನಪ್ಪ ಪೂಜಾರಿ ಅವರ ಕುಟುಂಬದ ಸದಸ್ಯರು ಕಾರ್ಯಕ್ರಮ ನಿಮಿತ್ತ ಕೋಟೆಕಾರ್‍ನ ಸಂಬಂ„ಕರ ಮನೆಗೆ ಬೀಗ ಹಾಕಿ ತೆರಳಿದ್ದರು. ಭಾನುವಾರ ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು .ಸಿಡಿಲಿನ ಬಡಿತಕ್ಕೆ ಗೋಡೆ ಬಿರುಕು ಬಿಟ್ಟಿದ್ದು ಮನೆಯ ಹಂಚಿನ ಛಾವಣಿ , ಬಚ್ಚಲು ಮನೆ ಸೇರಿದಂತೆ ಮನೆಯೊಳಗಿನ ವಸ್ತುಗಳು, ವಿದ್ಯುತ್ತ್ ಲೈನ್ ಸಿಡಲಾಘಾತಕ್ಕೆ ಹಾನಿಯಾಗಿದೆ. ಈ ಬಗ್ಗೆ ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದು ಸೋಮೇಶ್ವರ ಪಂ.ಉಪಾಧ್ಯಕ್ಷ ರಾಜೇಶ್‍ಉಚ್ಚಿಲ್,ಜಿಲ್ಲಾ ಪಂ. ಉಪಾಧ್ಯಕ್ಷ ಸತೀಶ್ ಕುಂಪಲ ಮನೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
