ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಪರಿಸರದಲ್ಲಿ ಸೋಮವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಸುಮಾರು 20ಕ್ಕೂ ಮಿಕ್ಕಿ ಮನೆಗಳಿಗೆ ಹಾನಿಯಾಗಿದ್ದು, ನೂರಾರು ಅಡಿಕೆ ಮರಗಳು ಮುರಿದು ಬಿದ್ದಿದೆ.

12btl-siddaktte ಇಲ್ಲಿನ ಸಿದ್ಧಕಟ್ಟೆ, ಕುಕ್ಕಿಪಾಡಿ, ಗಾಡಿಪಲ್ಕೆ, ಕರ್ಪೆ , ರಾಯಿ, ಪಂಜಿಕಲ್ಲು ಮತ್ತಿತರ ಕಡೆಗಳಲ್ಲಿ ಸಿಡಿಲಿನಿಂದ ಮನೆಗೆ ಹಾನಿಯಾಗಿದ್ದರೆ, ಇನ್ನೂ ಹಲವೆಡೆ ಗಾಳಿ ಮಳೆಗೆ ಹಲವಾರು ಅಡಿಕೆ ಮರಗಳು ಮುರಿದು ಬಿದ್ದಿದೆ. ಸಿದ್ಧಕಟ್ಟೆಯಲ್ಲಿ ಸುಜಾತ ಎಂಬವರ ಮನೆಗೆ ಸಿಡಿಲಿನಿಂದ ಭಾರೀ ನಷ್ಟ ಉಂಟಾಗಿದ್ದು, ಸಂಗಬೆಟ್ಟು ಗ್ರಾಮಕರಣಿಕ ಶಿವಾನಂದ ನಾಟೇಕರ್, ಪಿಡಿಒ ಪದ್ಮನಾಭ ಸಾಲಿಯಾನ್, ಗ್ರಾಮ ಸಹಾಯಕ ಸತೀಶ್ ಶೆಟ್ಟಿಗಾರ್ ಮತ್ತಿತರರು ಸ್ಥಳ ಪರಿಶೀಲನೆ ನಡೆಸಿ ತಹಶೀಲ್ದಾರ್ಗೆ ವರದಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

 

By Suddi9

Leave a Reply

Your email address will not be published. Required fields are marked *