ಬಂಟ್ವಾಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ , ಶ್ರೀ ಕ್ಷೇ.ಧ.ಗ್ರಾ.ಯೋಜನೆ ದೇವಸ್ಯಪಡೂರು, ಅಲ್ಲಿಪಾದೆ ಶ್ರೀ ರಾಮ ಸೇವಾ ಟ್ರಸ್ಟ್ , ಶ್ರೀ ರಾಮ ಯುವ ವೃಂದ ಇವರ ಸಹಯೋಗದಲ್ಲಿ ಶ್ರೀ ಕ್ಷೇ.ಧ.ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಧ.ಮಂ.ಸಂಚಾರಿ ಆಸ್ಪತ್ರೆಯ ಉಚಿತ ಚಿಕಿತ್ಸಾ ಶಿಬಿರವು ಬಂಟ್ವಾಳ ತಾಲೂಕು ಅಲ್ಲಿಪಾದೆ ಶ್ರೀ ರಾಮ ಸಭಾಭವನದಲ್ಲಿ ಮೇ. 6 ಬುಧವಾರ ಜರಗಿತು.

ಮಂಗಳೂರು ಉದ್ಯಮಿ ರವಿಕುಮಾರ್ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಆರೋಗ್ಯವಂತ ಸಮಾಜದಿಂದ ಉತ್ತಮ ಪ್ರಗತಿ ಸಾ„ಸಲು ಸಾಧ್ಯ. ಗ್ರಾಮೀಣ ಪ್ರದೇಶದ ಬಡ ಜನರು ದುಬಾರಿ ಹಣ ತೆತ್ತು ಔಷ„ ಪಡೆಯುವ ಪರಿಸ್ಥಿತಿ ಎದುರಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಚಾರಿ ಆಸ್ಪತ್ರೆ ಮೂಲಕ ಗ್ರಾಮೀಣ ಬಡ ಕುಟುಂಬಗಳು ಉಚಿತವಾಗಿ ಉತ್ತಮ ಔಷ„ ಪಡೆದು ಕಾಯಿಲೆ ಗುಣಪಡಿಸಿಕೊಂಡು ಆರೋಗ್ಯವಂತ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಸರಪಾಡಿ ಗ್ರಾ.ಪಂ.ಅಧ್ಯಕ್ಷ ಧನಂಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಧ.ಮಂ.ಮೆಡಿಕಲ್ ಟ್ರಸ್ಟ್ ನ ಕಾರ್ಯದರ್ಶಿ ಶಿಶುಪಾಲ ಪೂವಣಿ ಅವರು ಮಾತನಾಡಿ ಶರೀರ ಉತ್ತಮ ಸ್ಥಿತಿಯಲ್ಲಿರಬೇಕಾದರೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಆರೋಗ್ಯ ತಪಾಸಣೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಮನೆ ಮತ್ತು ಸುತ್ತುಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದರಿಂದ ಖಾಯಿಲೆ ಬಾರದಂತೆ ತಡೆಗಟ್ಟಬಹುದು ಎಂದರು. ಶ್ರೀ ಕ್ಷೇ.ಧ.ಗ್ರಾ.ಯೋ. ಬಂಟ್ವಾಳ ವಲಯದ ಯೋಜನಾ„ಕಾರಿ ಕು|ಸುನೀತಾ ನಾಯಕ್, ನಾವೂರು ಗ್ರಾ.ಪಂ.ಅಧ್ಯಕ್ಷ ಬೇಬಿ ಸುವರ್ಣ, ಸಂಚಾರಿ ಆಸ್ಪತ್ರೆಯ ವೈದ್ಯಾ„ಕಾರಿ ಡಾ| ನಾರಾಯಣ ಪ್ರಭು, ಜಿ.ಪಂ.ಸದಸ್ಯೆ ಗಿರಿಜಾ, ನಾರಾಯಣ ಕಿನ್ನೂರು, ಭವಾನಿ, ನಾವೂರು ಗ್ರಾ.ಪಂ.ಅಧ್ಯಕ್ಷ ಬೇಬಿ ಸುವರ್ಣ, ಸರಪಾಡಿ ಗ್ರಾ.ಪಂ. ಅಧ್ಯಕ್ಷ ಧನಂಜಯ ಶೆಟ್ಟಿ , ಸತೀಶ ಬೆಳ್ಳೂರು, ಕೃಷ್ಣಪ್ಪ ಪೂಜಾರಿ ಅಲ್ಲಿಪಾದೆ, ಶ್ರೀನಿವಾಸ ಮೇಸ್ತ್ರಿ , ಗೋಪಾಲ ಕೆಲ್ಲೆರ್ಮಾರ್, ಲೋಕೇಶ ಕೆಲ್ಲೆರ್ಮಾರ್, ವಾಸು ಪೂಜಾರಿ ಅಲ್ಲಿಪಾದೆ, ಭವಾನಿ ಶಂಕರ್ ರಾವ್ ಕೇದಗೆ, ಅಲ್ಲಿಪಾದೆ ಶ್ರೀ ರಾಮ ಯುವ ವೃಂದ, ಶ್ರೀ ರಾಮ ಸೇವಾ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.
