ಬಂಟ್ವಾಳ :ಬಂಟ್ವಾಳ ತಾಲ್ಲೂಕಿನ ತುಂಬೆ ಮತ್ತು ಪುದು ಗ್ರಾಮ ಪಂಚಾಯಿತಿ ಗಡಿಭಾಗದಲ್ಲಿ ನಿರ್ಮಾಣಗೊಂಡ ಮಲ್ಲಿಕೋಡಿ( ಕಡೆಗೋಳಿ) ಸಂಪರ್ಕ ರಸ್ತೆಯನ್ನು ತುಂಬೆ ಗ್ರಾಮಪಂಚಾಯಿತಿ ಅಧ್ಯಕ್ಷ ಮಹಮ್ಮದ್ ವಳವೂರು ಅವರುಮಂಗಳವಾರ ಉದ್ಘಾಟಿಸಿದರು.
![]()
ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿ.ಪಂ.ಉಪಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ತಾ.ಪಂ.ಸದಸ್ಯೆ ಅನಿತಾ ಎಂ. ಪೂಜಾರಿ, ಮಾಜಿ ಸದಸ್ಯ ಸೋಮಪ್ಪ ಕೋಟ್ಯಾನ್ ಮತ್ತಿತರರು ಇದ್ದರು.
